ಮುಡಾ ಸೈಟು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಲೋಕಾಯುಕ್ತ ಅಧಿಕಾರಿಗಳಿಂದ ಶುಕ್ರವಾರ ಸುಮಾರು 3 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ಸೋದರನಿಂದ ಬಂದ ಜಮೀನು ಒತ್ತುವರಿ ಆಗಿದ್ದಕ್ಕೆ ಪರಿಹಾರವಾಗಿ 14 ಸೈಟು ಪಡೆದ ಬಗ್ಗೆ ರಾಜ್ಯಪಾಲರು ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಲೋಕಾಯುಕ್ತರು ಶುಕ್ರವಾರ ಸಿಎಂ ಪತ್ನಿ ಪಾರ್ವತಿ ಅವರನ್ನು ವಿಚಾರಣೆಗೊಳಪಡಿಸಿದರು.
ವಿಚಾರಣೆ ವೇಳೆ ನಾನು ಯಾವುದೇ ತಪ್ಪು ಮಾಡಿಲ್ಲ. ಕಾನೂನುಬದ್ಧವಾಗಿಯೇ ಸೈಟು ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಪತ್ರವನ್ನು ವೈಟ್ನರ್ ನಿಂದ ಅಳಿಸಿ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ನನಗೆ ಸರ್ಕಾರದ ರೀತಿ ಪತ್ರ ಬರೆಯಲು ಬರುವುದಿಲ್ಲ. ಏನೋ ತಪ್ಪಾಗಿದೆ ಎಂಬ ಅನಿಸಿದ್ದಕ್ಕೆ ಹಾಗೆ ಮಾಡಿದೆ ಎಂದು ಉತ್ತರಿಸಿದ್ದಾರೆ.
ನೀವು ಹಲವು ಕಡೆ ಹಾಕಿರುವ ಸಹಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಏಕೆ ಎಂಬ ಪ್ರಶ್ನೆಗೆ ನಾನು ಯಾವಾಗಲೂ ಸಹಿ ಹಾಕುವುದಿಲ್ಲ. ಯಾವಾಗಲಾದರೂ ಒಮ್ಮೆ ಸಹಿ ಹಾಕುತ್ತೇನೆ. ಹಾಗಾಗಿ ಸಹಿಯಲ್ಲಿ ವ್ಯತ್ಯಾಸಗಳು ಆಗಿರಬೇಕು ಎಂದು ಪಾರ್ವತಿ ಉತ್ತರಿಸಿದ್ದಾರೆ.