ಭಾರತದ ಪ್ರಮುಖ ಪಾವತಿ ಮತ್ತು ಆರ್ಥಿಕ ಸೇವೆಗಳ ವಿತರಣಾ ಕಂಪನಿಯಾದ ಪೇಟಿಎಂ (ಒನ್97 ಕಮ್ಯುನಿಕೇಶನ್ ಲಿಮಿಟೆಡ್), ಕ್ಯೂಆರ್ ಕೋಡ್, ಸೌಂಡ್ಬಾಕ್ಸ್, ಮತ್ತು ಮೊಬೈಲ್ ಪಾವತಿಗಳ ಪ್ರವರ್ಥಕ, ಈಗ ಪೇಟಿಎಂ UPI ತಾಂತ್ರಿಕತೆಯು UPI ಟ್ರೇಡಿಂಗ್ ಬ್ಲಾಕ್ಸ್ (ಒಂದೇ ಬ್ಲಾಕ್‌ನಲ್ಲಿ ಬಹು ಡೆಬಿಟ್‌ಗಳು) ಅನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಇದು ಸ್ಟಾಕ್ ಟ್ರೇಡರ್‌ಗಳ ಬ್ರೋಕಿಂಗ್ ಅನುಭವವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ, ಪೇಟಿಎಂ UPI ಬಳಕೆದಾರರು ಬ್ರೋಕರೇಜ್ ಅಪ್ಲಿಕೇಶನ್‌ಗಳಲ್ಲಿ ದೊಡ್ಡ ಮೊತ್ತವನ್ನು ವರ್ಗಾಯಿಸುವ ಅಗತ್ಯವಿಲ್ಲದೆ ನೇರವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತ ಪಾವತಿ ಕಡಿತವನ್ನು ಹೊಂದಿಸಿಕೊಳ್ಳಬಹುದು. ಇದರಿಂದ ಅವರು ನಿಧಿಗಳನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಉಳಿಸಿಕೊಂಡು, ವಹಿವಾಟು ಮಾಡಲು ಬಡ್ಡಿ ಗಳಿಸಬಹುದಾಗಿದೆ.
NPCI ಮೂಲಸೌಕರ್ಯದಲ್ಲಿ ನಿರ್ಮಿಸಲಾದ ಪೇಟಿಎಂ UPI ಟ್ರೇಡಿಂಗ್ ಬ್ಲಾಕ್ಸ್ ವಹಿವಾಟು ನಡೆದಾಗ ಮಾತ್ರ ಪಾವತಿ ಕಡಿತಗೊಳಿಸುತ್ತದೆ, ಇದನ್ನು UPI PIN ಅಗತ್ಯವಿಲ್ಲದೆ ಸ್ವಯಂಚಾಲಿತವಾಗಿ ಕಾರ್ಯಗತಗೊಳಿಸಲಾಗುತ್ತದೆ. ಸಂಪೂರ್ಣ ಪಾರದರ್ಶಕತೆಯನ್ನು ಒದಗಿಸುವುದರಿಂದ, ಇದರಿಂದ ನಿಧಿಗಳು ಹೂಡಿಕೆದಾರರ ಬ್ಯಾಂಕ್ ಖಾತೆಯಲ್ಲಿ ಉಳಿಯುತ್ತವೆ ಮತ್ತು ಸುಲಭವಾಗಿ ವಹಿವಾಟು ಪಾವತಿಸಲು ಅನುಕೂಲವಾಗುತ್ತದೆ.
ಸದ್ಯಕ್ಕೆ, ಆಕ್ಸಿಸ್ ಬ್ಯಾಂಕ್ (@ptaxis) ಮತ್ತು YES ಬ್ಯಾಂಕ್ (@ptyes) ನ UPI ಹ್ಯಾಂಡಲ್‌ಗಳಿಗೆ ಈ ವೈಶಿಷ್ಟ್ಯ ಲಭ್ಯವಿದ್ದು, ಶೀಘ್ರದಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (@ptsbi) ಮತ್ತು HDFC ಬ್ಯಾಂಕ್ (@pthdfc) ನ UPI ಹ್ಯಾಂಡಲ್‌ಗಳಿಗೆಲೂ ಇದು ಲಭ್ಯವಾಗಲಿದೆ.
ಪೇಟಿಎಂ ಪ್ರತಿನಿಧಿ ಹೇಳಿದರು:
“ನಾವು ಪೇಟಿಎಂ UPI ಯಲ್ಲಿ UPI ಟ್ರೇಡಿಂಗ್ ಬ್ಲಾಕ್ಸ್ ಪರಿಚಯಿಸುತ್ತಿದ್ದೇವೆ ಎಂಬುದಕ್ಕೆ ತುಂಬಾ ಸಂತೋಷವಾಗಿದೆ. ಇದರಿಂದ ಸ್ಟಾಕ್ ಟ್ರೇಡರ್‌ಗಳಿಗೆ ಅನುಕೂಲವಾಗುವಂತೆ ನೇರವಾಗಿ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತ ಪಾವತಿ ಕಡಿತವನ್ನು ಸಾಧ್ಯವಾಗಿಸುತ್ತೇವೆ. ಪೇಟಿಎಂ UPI ನ ವಿಶ್ವಾಸಾರ್ಹ ಪಾವತಿಗಳೊಂದಿಗೆ, ನಾವು ನಿರಂತರವಾಗಿ ಹೊಸತನ್ನು ಪರಿಚಯಿಸಿ ಬಳಕೆದಾರರ ವಹಿವಾಟು ಅನುಭವವನ್ನು ಮತ್ತಷ್ಟು ಸುಧಾರಿಸಲು ಸಂಕಲ್ಪಗೊಂಡಿದ್ದೇವೆ.”
UPI ಟ್ರೇಡಿಂಗ್ ಬ್ಲಾಕ್ಸ್‌ನ ಪ್ರಮುಖ ಪ್ರಯೋಜನ:
ನಿಧಿಗಳನ್ನು ಬ್ರೋಕರ್‌ಗಳಿಗೆ ವರ್ಗಾಯಿಸುವ ಅಗತ್ಯವಿಲ್ಲ – ಬ್ಯಾಂಕ್ ಖಾತೆಯಲ್ಲೇ ನಿಧಿಗಳನ್ನು ನಿರ್ಬಂಧಿಸಲಾಗುವುದು.
ಪೂರ್ಣ ಪಾರದರ್ಶಕತೆ – ಪೇಟಿಎಂ ಅಪ್ಲಿಕೇಶನ್‌ನಲ್ಲಿ ಸ್ಥಗಿತಗೊಂಡ ನಿಧಿಗಳನ್ನು ಸುಲಭವಾಗಿ ನೋಡಬಹುದು.
ಬಡ್ಡಿ ಗಳಿಸಬಹುದು – ನಿಧಿಗಳು ವಹಿವಾಟು ಮಾಡುವವರೆಗೂ ಬ್ಯಾಂಕ್ ಖಾತೆಯಲ್ಲಿ ಉಳಿಯುತ್ತವೆ.
ಸ್ವಯಂಚಾಲಿತ ಪಾವತಿ ಕಡಿತ – ವಹಿವಾಟು ನಡೆದಾಗ UPI PIN ಅಗತ್ಯವಿಲ್ಲದೆ ಪಾವತಿ ನಡೆಯುತ್ತದೆ.
UPI ಟ್ರೇಡಿಂಗ್ ಬ್ಲಾಕ್ಸ್ ಅನ್ನು ಹೇಗೆ ಸಕ್ರಿಯಗೊಳಿಸಬಹುದು?
ನಿಮ್ಮ ಬ್ರೋಕಿಂಗ್ ಪ್ಲಾಟ್‌ಫಾರ್ಮ್‌ಗೆ ಲಾಗಿನ್ ಆಗಿ.
‘Add Funds’ ವಿಭಾಗಕ್ಕೆ ಹೋಗಿ.
‘Single Block Multiple Debits’ ಆಯ್ಕೆಯನ್ನು ಆಯ್ಕೆಮಾಡಿ.
ಪಾವತಿ ಆಯ್ಕೆಗಳಲ್ಲಿ ಪೇಟಿಎಂ ಅಪ್ಲಿಕೇಶನ್ ಅನ್ನು ಆಯ್ಕೆಮಾಡಿ.
ನಿಮ್ಮ UPI PIN ನಮೂದಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಪೇಟಿಎಂ ಇತ್ತೀಚೆಗೆ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗಾಗಿ ‘Receive Money QR Widget’ ಪರಿಚಯಿಸಿದೆ, ಇದು ಇನ್‌ಫ್ಲುಯೆನ್ಸರ್‌ಗಳು, ಅಂಗಡಿ ಮಾಲೀಕರು, ಫ್ರೀಲಾನ್ಸರ್‌ಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಾವತಿಗಳನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ. ಜೊತೆಗೆ, ತಕ್ಷಣ ಪಾವತಿ ದೃಢೀಕರಣಕ್ಕಾಗಿ ನಾಣ್ಯ ಬೀಳುವ ಶಬ್ದ ಸೂಚನೆ ಪರಿಚಯಿಸಲಾಗಿದೆ. ಪೇಟಿಎಂ UPI Lite, RuPay ಕ್ರೆಡಿಟ್ ಕಾರ್ಡ್ ಲಿಂಕಿಂಗ್, ಮತ್ತು ಸ್ವಯಂಚಾಲಿತ ಪಾವತಿ ಸೇವೆಗಳನ್ನು ಒದಗಿಸುತ್ತಿದ್ದು, ಉಪಯೋಗಕರ ವಹಿವಾಟು ಅನುಭವವನ್ನು ಸುಧಾರಿಸಲು ಮುಂಚೂಣಿಯಲ್ಲಿದೆ. ಪೇಟಿಎಂ ಇದೀಗ UAE, ಸಿಂಗಾಪುರ್, ಫ್ರಾನ್ಸ್, ಮಾರಿಷಸ್, ಭೂತಾನ್, ಶ್ರೀಲಂಕಾ ಮತ್ತು ನೇಪಾಳದಲ್ಲಿ ಅಂತಾರಾಷ್ಟ್ರೀಯ UPI ಪಾವತಿಗಳನ್ನು ಬೆಂಬಲಿಸುತ್ತಿದೆ.


