ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಒಟ್ಟಾರೆ ಆಸ್ತಿ ಮೌಲ್ಯ 593 ಕೋಟಿ ರೂ. ಆಗಿದೆ.
ರಾಮನಗರದಲ್ಲಿ ಗುರುವಾರ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆ ಲೋಕಸಭೆಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್, ಅಫಿದಾವಿತ್ ನಲ್ಲಿ ಅಧಿಕೃತವಾಗಿ ಆಸ್ತಿ ಘೋಷಣೆ ಮಾಡಿದ್ದಾರೆ.
ಡಿಕೆ ಸುರೇಶ್ ನೀಡಿದ ಆಸ್ತಿ ವಿವರದ ಪ್ರಕಾರ 486.33 ಕೋಟಿ ಸ್ಥಿರಾಸ್ತಿ ಹಾಗೂ 106.71 ಚರಾಸ್ಥಿ ಹೊಂದಿದ್ದಾರೆ. ಮಾಲ್ ಸೇರಿದಂತೆ 48 ಕಡೆ ಭೂಮಿ ಹೊಂದಿದ್ದು, 21 ಕಡೆ ಕೃಷಿ ಭೂಮಿ ಹಾಗೂ 27 ಕಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ.
ಅಣ್ಣ ಹಾಗೂ ಡಿಸಿಎಂ ಡಿಕೆಶಿಗೆ 30 ಕೋಟಿ ರೂ. ಸಾಲ ನೀಡಿದ್ದು, ಬ್ಯಾಂಕ್ ಗಳಲ್ಲಿ 50 ಕೋಟಿ ರೂ. ಸಾಲ ಹೊಂದಿರುವುದಾಗಿ ವಿವರ ನೀಡಿದ್ದಾರೆ.