Thursday, December 25, 2025
Google search engine
Homeಅಪರಾಧಒಬ್ಬನ ಹಿಂದೆ ಬಿದ್ದ ತಾಯಿ-ಮಗಳಿಗೆ ಬಲಿಯಾದ ಅಳಿಯ: ಹನಿಮೂನ್ ಕೊಲೆಯೇ ಸ್ಫೂರ್ತಿ!

ಒಬ್ಬನ ಹಿಂದೆ ಬಿದ್ದ ತಾಯಿ-ಮಗಳಿಗೆ ಬಲಿಯಾದ ಅಳಿಯ: ಹನಿಮೂನ್ ಕೊಲೆಯೇ ಸ್ಫೂರ್ತಿ!

ಮದುವೆ ಆದ ಕೆಲವೇ ದಿನಗಳಿಗೆ ಗಂಡ ಕೊಲೆಯಾದ ತೆಲಂಗಾಣದ ಹನಿಮೂನ್ ಮರ್ಡರ್ ಮಿಸ್ಟರಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೊಲೆಯ ಕಾರಣ ತಿಳಿದು ಪೊಲೀಸರೇ ಹೌಹಾರಿದ್ದಾರೆ.

ಹೌದು, ಇತ್ತೀಚೆಗೆ ಹನಿಮೂನ್ ಗೆ ಹೋಗೋಣ ಎಂದು ಪತಿ ರಘುವಂಶಿಯನ್ನು ಕರೆದುಕೊಂಡು ಹೋಗಿ ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ ಮಾಡಿದ ಪ್ರಕರಣವೇ ತೆಲಂಗಾಣದ ಕೊಲೆಗೆ ಸ್ಫೂರ್ತಿ ಎಂಬ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕೊಲೆಯಾದ ತೇಜಸ್ವಿರ್ ಶವ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಮೈದಾನದಲ್ಲಿ ಅನಾಥ ಶವವಾಗಿ ಪತ್ತೆಯಾಗಿತ್ತು. ಕೈ ಮೇಲೆ ಅಮ್ಮ ಎಂಬ ಟ್ಯಾಟೊದಿಂದ ಶವದ ಗುರುತು ಪತ್ತೆ ಹಚ್ಚಲಾಗಿತ್ತು. ಪತ್ನಿ ಐಶ್ವರ್ಯ ಹಾಗೂ ಪ್ರಿಯಕರ ತಿರುಮಲ ರಾವ್ ಷಡ್ಯಂತ್ರ ರೂಪಿಸಿ ಕೊಲೆ ಮಾಡಿದ್ದರು. ಗೋದ್ವಾಲ್ ಪೊಲೀಸರು ವಿಚಾರಣೆ ನಡೆಸಿದಾಗ ಮೇಘಾಲಯದಲ್ಲಿ ರಘುವಂಶಿಯ ಕೊಲೆಯ ವರದಿ ನೋಡಿ ಅದರಿಂದ ಸ್ಫೂರ್ತಿಗೊಂಡು ತೇಜಸ್ವಿರ್ ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಬೈಕ್ ನಲ್ಲಿ ಹೊರಗೆ ಸುತ್ತಾಡಿಕೊಂಡು ಬರೋಣ ಎಂದು ತೇಜಸ್ವಿರ್ ನನ್ನು ಓಲೈಸಿ ಕರೆದುಕೊಂಡು ಹೋಗಿದ್ದು, ಈ ವೇಳೆ ಗುಂಪು ಮಾರಕಾಸ್ತ್ರಗಳಿಂದ ತೇಜಸ್ವಿರ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿತ್ತು. ಈ ವೇಳೆ ಐಶ್ವರ್ಯ ತಾನು ತಪ್ಪಿಸಿಕೊಂಡೆ ಎಂದು ನಾಟಕವಾಡಿದ್ದಳು.

ಕಿಡ್ನಾಪ್ ಮತ್ತು ಕೊಲೆ ಪ್ರಕರಣ ಎಂದು ಐಶ್ವರ್ಯ ನಾಟಕವಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಳು. ಆದರೆ ತೇಜಸ್ವಿರ್ ಅಂತ್ಯಸಂಸ್ಕಾರದ ವೇಳೆ ಆಕೆ ದುಃಖ ಪಟ್ಟಿದ್ದಾಗಲಿ, ಅತ್ತಿದ್ದಾಗಲಿ ಮಾಡದೇ ಇರುವುದು ಸಂಬಂಧಿಕರ ಅನುಮಾನಕ್ಕೆ ಕಾರಣವಾಗಿತ್ತು. ಸಂಬಂಧಿಕರು ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕ್ ಮ್ಯಾನೇಜರ್ ಜೊತೆ ಐಶ್ವರ್ಯ ಸಂಬಂಧ ಹೊಂದಿದ್ದಾಳೆ. ಆದ್ದರಿಂದ ಈಕೆಯನ್ನು ಮದುವೆ ಆಗಬೇಡ ಎಂದು ಸಂಬಂಧಿಕರು ಸಲಹೆ ನೀಡಿದ್ದರು. ತೇಜಸ್ವಿರ್ ಸೋದರ ಅಣ್ಣ ನಾಪತ್ತೆಯಾದ ನಂತರ ಐಶ್ವರ್ಯ ಮೇಲೆ ನಿಗಾ ವಹಿಸಲು ಶುರು ಮಾಡಿದ. ಆದರೆ ಆಕೆ ಏನೂ ಆಗದೇ ಇರುವಂತೆ ನಡೆದುಕೊಂಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.

ಮೇಘಾಲಯದ ಹನಿಮೂನ್ ಪ್ರಕರಣದಿಂದ ಸ್ಫೂರ್ತಿ ಪಡೆದು ಅದೇ ರೀತಿ ಕೊಲೆ ಮಾಡಲು ಆರಂಭದಲ್ಲಿ ಸಂಚು ನಡೆದಿತ್ತು. ಆದರೆ ತಿರುಮಲ ರಾವ್, ಸ್ವಲ್ಪ ಬದಲಾವಣೆ ಮಾಡಿ ಸಹಚರರಿಂದ ಹಲ್ಲೆ ಮಾಡಿ ಕಿಡ್ನಾಪ್, ದರೋಡೆ ಪ್ರಕರಣ ಎಂಬಂತೆ ಬಿಂಬಿಸಿ ಕೊಲೆ ಮಾಡಲು ನಿರ್ಧರಿಸಿದ್ದ. ಇದರಿಂದ ಪ್ರಕರಣ ದಿಕ್ಕು ತಪ್ಪಿಸಬಹುದು ಎಂದು ಭಾವಿಸಲಾಗಿತ್ತು.

23 ವರ್ಷದ ಐಶ್ವರ್ಯ ಗಂಡನ ಬೈಕ್ ಮೇಲೆ ಜಿಪಿಎಸ್ ಕೂಡ ಅಳವಡಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದಳು. ಅಷ್ಟೂ ಸಾಲದು ಎಂಬಂತೆ ನೆರೆ ಮನೆಯ ಮೋಹನ್ ಎಂಬಾತ ಕೂಡ ಕಣ್ಣಿಡುವಂತೆ ಸೂಚಿಸಿದ್ದರು.

ಒಬ್ಬನ ಹಿಂದೆ ಬಿದ್ದಿದ್ದ ತಾಯಿ- ಮಗಳು

ಪೊಲೀಸರು ವಿಚಾರಣೆ ಆಳಕ್ಕೆ ಇಳಿದಾಗ ಅಸಲಿಗೆ ಒಬ್ಬನ ಹಿಂದೆ ತಾಯಿ-ಮಗಳು ಬಿದ್ದಿದ್ದರಿಂದ ಅಳಿಯ ಜೀವ ತೆರಬೇಕಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಐಶ್ವರ್ಯ ತಾಯಿ ಸುಜಾತ ಹಣಕಾಸು ಸಂಸ್ಥೆಯೊಂದರಲ್ಲಿ ಸ್ವೀಪರ್ (ಕಸ ಗುಡಿಸಿ ಸ್ವಚ್ಛಗೊಳಿಸುವ) ಕೆಲಸ ಮಾಡಿಕೊಂಡಿದ್ದು, ಅಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ತಿರುಮಲ ಪರಿಚಯ ಆಗಿ 2016ರಿಂದ ಸಂಬಂಧ ಹೊಂದಿದ್ದರು. ಸುಜಾತಾ ರಜೆ ಇದ್ದಾಗ ಆಕೆಯ ಮಗಳು ಐಶ್ವರ್ಯ ಕೆಲಸ ಮಾಡುತ್ತಿದ್ದಳು. ತಿರುಮಲ ಇಬ್ಬರ ಜೊತೆಗೂ ಸಂಬಂಧ ಬೆಳೆಸಿದ್ದ.

ತಿರುಮಲ ಜೊತೆ ಮಗಳು ಐಶ್ವರ್ಯ ಸಂಬಂಧ ಹೊಂದಿರುವುದನ್ನು ಅರಿತ ತಾಯಿ ಸುಜಾತಾ ಇದಕ್ಕೆ ವಿರೋಧ ವ್ಯಕ್ತಪಡಿಸಿದಳು. ಆದರೆ ಮಗಳು ತಾಯಿ ಮಾತು ಕೇಳದೇ ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಳು. ಈ ಮದುವೆ ತಪ್ಪಿಸಲು ಸುಜಾತ ತೇಜಸ್ವಿರ್ ಜೊತೆ ಮದುವೆ ನಿಗದಿಪಡಿಸಿದಳು.

ಈ ಸಮಯದಲ್ಲಿ ತಿರುಮಲ ಜೊತೆ ಮನೆ ಬಿಟ್ಟು ಹೋಗಿದ್ದ ಐಶ್ವರ್ಯ ತಾಯಿ ವರದಕ್ಷಿಣೆ ರೂಪದಲ್ಲಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮರಳಿದ್ದಳು. ಅಲ್ಲದೇ ತೇಜಸ್ವಿರ್ ಜೊತೆ ಮದುವೆಗೆ ಒಪ್ಪಿದಳು.

ಮನೆಯವರು ಬೇಡ ಅಂದರೂ ತೇಜಸ್ವಿರ್ ಮದುವೆಗೆ ಒಪ್ಪಿ ಮೇ 18ರಂದು ಮದುವೆ ಆದ. ಐಶ್ವರ್ಯ ಮದುವೆ ನಡುವೆಯೂ ಸೇರಿ ಸುಮಾರು 2000 ಬಾರಿ ತಿರುಮಲಗೆ ಕರೆ ಮಾಡಿ ಮಾತನಾಡಿದ್ದಳು. ಮದುವೆ ದಿನವೂ ಆತನೊಂದಿಗೆ ವೀಡಿಯೊ ಕಾಲ್ ನಲ್ಲಿ ಕೂಡ ಮಾತನಾಡಿದ್ದಳು.

ತಿರುಮಲ ನೇಮಿಸಿದ್ದ ಮೂವರು ದುಷ್ಕರ್ಮಿಗಳು ಮದುವೆ ಆದ ಕೆಲವು ದಿನಗಳ ನಂತರ ತೇಜಸ್ವಿರ್ ನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದು. ಚಾಲಕನ ಪಕ್ಕದಲ್ಲಿ ಕೂರಿಸಿಕೊಂಡ ನಂತರ ಹಿಂದಿನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ನಂತರ ತಾವು ಅಂದುಕೊಂಡ ಖಾಲಿ ನಿವೇಶನದ ಬಳಿ ನಿಲ್ಲಿಸಿ ಶವ ಎಸೆದು ಹೋಗಿದ್ದಾರೆ. ಸಹಚರರಿಗೆ ರಕ್ತದ ಕಲೆಗಳಿದ್ದ ಬಟ್ಟೆ ಬದಲು ಹೊಸ ಬಟ್ಟೆ ಕೊಡಿಸಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments