Thursday, December 25, 2025
Google search engine
Homeಅಪರಾಧ102.55 ಕೋಟಿ ದಂಡ ಪಾವತಿಸಲು ನಟಿ ರನ್ಯಾ ರಾವ್ ಗೆ ನೋಟಿಸ್ ಜಾರಿ!

102.55 ಕೋಟಿ ದಂಡ ಪಾವತಿಸಲು ನಟಿ ರನ್ಯಾ ರಾವ್ ಗೆ ನೋಟಿಸ್ ಜಾರಿ!

ಬೆಂಗಳೂರು: ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಗೆ 101.55 ಕೋಟಿ ರೂ. ದಂಡ ಪಾವತಿಸುವಂತೆ ಕಂದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence) ನೋಟಿಸ್ ಜಾರಿ ಮಾಡಿದೆ.

ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದ ಪ್ರಕರಣದ ತನಿಖೆ ಪ್ರಗತಿ ಹಂತದಲ್ಲಿರುವ ನಡುವೆ ಸರ್ಕಾರಕ್ಕೆ ಆದ ನಷ್ಟ ಭರ್ತಿಗೆ  ಡಿಆರ್​ಐ ಮುಂದಾಗಿದೆ.

ಪ್ರಸ್ತುತ ವಿಚಾರಣಾಧೀನ ಕೈದಿಯಾಗಿರುವ ರನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೂ ಜೈಲಿನಿಂದಲೇ ದಂಡ ಭರ್ತಿಗೆ ಡಿಆರ್​ಐ ಅಧಿಕಾರಿಗಳು ಅಡ್ ಜುಡಿಕೇಷನ್ ಮಾಡಿ ನೋಟಿಸ್ ನೀಡಿದ್ದಾರೆ.

ರನ್ಯಾ ರಾವ್ 127.3 ಕೆಜಿ ಚಿನ್ನ ಅಕ್ರಮ ಸಾಗಾಟ ಮಾಡಿರುವುದು ತನಿಖೆ ವೇಳೆ ದೃಢಪಟ್ಟಿದೆ. ಮಾರ್ಚ್ 4ರಂದು ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಹಿಂದಿನ 6 ತಿಂಗಳ ಕಾಲ ನಡೆದ ಕಳ್ಳಸಾಗಾಣೆಯಲ್ಲಿ ಸರ್ಕಾರಕ್ಕೆ ಆಗಿರುವ ನಷ್ಟ ಭರ್ತಿಗೆ  ಡಿಆರ್​ಐ ಅಧಿಕಾರಿಗಳು ಮುಂದಾಗಿದ್ದಾರೆ.

102.55 ಕೋಟಿ ರೂ. ದಂಡ ಪಾವತಿಸುವಂತೆ DRIನಿಂದ ನೋಟಿಸ್ ಜಾರಿ ಆಗಿದೆ. ಇಂದು (ಸೆಪ್ಟೆಂಬರ್ 2) ಜೈಲಿಗೆ ತೆರಳಿ ರನ್ಯಾ ಸೇರಿ ನಾಲ್ವರೂ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ದಂಡ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಎ2 ಆರೋಪಿ ತರುಣ್ ಕೊಂಡುರು ರಾಜು 67.6 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ಧೃಡವಾಗಿದೆ.

ತರುಣ್ ಕೊಂಡುರು ರಾಜು ಗೆ 62 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಸಾಹಿಲ್ ಜೈಲ್ ಮತ್ತು ಭರತ್ ಜೈನ್ ತಲಾ 63.61 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ಧೃಡಪಟ್ಟಿದೆ. ಭರತ್ ಜೈನ್ ಹಾಗೂ ಸಾಹಿಲ್ ಜೈನ್ 53 ಕೋಟಿ ದಂಡ ಪಾವತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ಮುಂದುವರಿಯುತ್ತೆ.

ನೋಟಿಸ್ ಸೇರಿ 2,500 ಪುಟಗಳ ದಾಖಲೆಗಳನ್ನ ನೀಡಿಲಾಗಿದೆ. ಇಂದು ಹೈಕೋರ್ಟ್​​ನಲ್ಲಿ ಕಾಫಿಪೋಸಾ ಅರ್ಜಿ ಕೂಡ ವಿಚಾರಣೆ ಆಗಿದೆ. ಕಾಫಿಪೋಸಾ ಅರ್ಜಿಯನ್ನು ಸೆ.11ಕ್ಕೆ ಮುಂದೂಡಲಾಗಿದೆ. ಡಿಅರ್ಐ ಅಧಿಕಾರಿಗಳು ಅತ್ಯಂತ ತ್ವರಿತ ಗತಿಯಲ್ಲಿ ತ‌ನಿಖೆ ನಡೆಸಿ ರಿಕವರಿಗೆ ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments