Wednesday, December 24, 2025
Google search engine
Homeಅಪರಾಧಬಾಗಲಕೋಟೆ: ಜಮೀನಿಗಾಗಿ ತಾಯಿ- ಮಗನ ಬರ್ಬರ ಹತ್ಯೆ

ಬಾಗಲಕೋಟೆ: ಜಮೀನಿಗಾಗಿ ತಾಯಿ- ಮಗನ ಬರ್ಬರ ಹತ್ಯೆ

ಜಮೀನು ವಿಚಾರವಾಗಿ ತಾಯಿ ಹಾಗೂ ಮಗನನ್ನು ಹೊಲದಲ್ಲಿ ಕಡಲಿಯಿಂದ ಕಡಿದು ದೊಡ್ಡಪ್ಪನ ಮಗ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಾಗಲಕೋಟೆಯ ಇಳಕಲ್ ನಲ್ಲಿ ನಡೆದಿದೆ.

ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಹಿನ್ನಲೆಯಲ್ಲಿ 45 ವರ್ಷದ ತಮ್ಮನ ಹೆಂಡತಿ ಸಂಗಮ್ಮ ನಿಂಗಪ್ಪ ಗೋಗಾಳ ಮತ್ತು 26 ವರ್ಷದ ತಮ್ಮನ ಮಗನಾದ ಸೋಮಪ್ಪ ನಿಂಗಪ್ಪ ಗೊನಾಳ ಅವರನ್ನು ಹತ್ಯೆ ಮಾಡಲಾಗಿದೆ.

ಅದೇ ಗ್ರಾಮದ ದೊಡ್ಡಪ್ಪನ ಮಗ ನಂದವಾಡಗಿ ಗ್ರಾಮದ ಸಣ್ಣಸೋಮಪ್ಪ ಗೋನಾಳ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ನಂದವಾಡಗಿ ಗ್ರಾಮದ ಸಣ್ಣಸೋಮಪ್ಪ ಗೋನಾಳ ಎಂಬ ವ್ಯಕ್ತಿರು ತನ್ನ ಸ್ವಂತ ತಮ್ಮನ ಜೊತೆ ಸುಮಾರು 19 ಎಕರೆ ಜಮೀನು ವಿಚಾರದಲ್ಲಿ ಈ ಹಿಂದೆಯಿಂದಲೂ ಜಗಳ ವಾಗ್ವಾದ ಇದ್ದೇ ಇತ್ತು. ಇತ್ತ ಇಲಕಲ್ಲ ಗ್ರಾಮೀಣ ಠಾಣೆಯಲ್ಲಿಯೂ ಒಂದು ಬಾರಿ ರಾಜಿ ಮಾಡಿ ಕಳುಹಿಸಲಾಗಿತ್ತು.

ಈ ಜಗಳ ವಿಕೋಪಕ್ಕೆ ಹೋದ ಹಿನ್ನಲೆಯಲ್ಲಿ ಸಂಗಮ್ಮ ನಿಂಗಪ್ಪ ಗೋಗಾಳ ಮತ್ತು ಸೋಮಪ್ಪ ನಿಂಗಪ್ಪ ಗೊನಾಳ ಅವರನ್ನು ಹೊಲದಲ್ಲಿಯೇ ಪ್ಲಾನ್‌ ಮಾಡಿ ಕುತ್ತಿಗೆಗೆ ಕೊಡಲಿಯಿಂದ ಹೊಡೆದು ಭರ್ಭರವಾಗಿ ಹತ್ಯೆ ಮಾಡಲಾಗಿದೆ.

ಬಾಗಲಕೋಟ ಎಸ್.ಪಿ. ಅಮರನಾಥರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ಸಣ್ಣಸೋಮಪ್ಪನ್ನು ಇಲಕಲ್ಲ ಗ್ರಾಮೀಣ ಠಾಣೆಗೆ ಕರೆತಂದಿದ್ದು, ಇತ್ತ ಹತ್ಯೆಗೀಡಾದವನ್ನು ಪೋಸ್ಟಮಾರ್ಟಂ ಮಾಡಲು ಇಲಕಲ್ಲ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

ಘಟನೆಯ ಕುರಿತು ಎಸ್.ಪಿ. ಅಮರಾನಾಥರೆಡ್ಡಿ ಮಾತನಾಡಿ ಈ ಕೃತ್ಯವನ್ನು ಇಬ್ಬರಿಂದ ಹೆಚ್ಚು ಜನ ಸೇರಿ ಮಾಡಿರುವ ಶಂಕೆ ಇದ್ದು ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಇನ್ನುಳಿದವರನ್ನು ಕೂಡಲೇ ಬಂಧಿಸಿಲಿದ್ದೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments