Thursday, December 25, 2025
Google search engine
Homeಅಪರಾಧಬೆಂಗಳೂರಿನ ದೇಶದಲ್ಲೇ ಅತೀ ದೊಡ್ಡ ಸೈಬರ್‌ ದಾಳಿ: ಕ್ರಿಸ್ಪೊ ಕಂಪನಿಯ 378 ಕೋಟಿ ರೂ. ವಂಚನೆ

ಬೆಂಗಳೂರಿನ ದೇಶದಲ್ಲೇ ಅತೀ ದೊಡ್ಡ ಸೈಬರ್‌ ದಾಳಿ: ಕ್ರಿಸ್ಪೊ ಕಂಪನಿಯ 378 ಕೋಟಿ ರೂ. ವಂಚನೆ

ಬೆಂಗಳೂರು:ಬೆಳ್ಳಂದೂರಿನ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಕಂಪನಿ ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​ನ ವ್ಯಾಲೆಟ್​​ ಹ್ಯಾಕ್​ ಮಾಡಿರುವ ಸೈಬರ್ ವಂಚಕರು 378 ಕೋಟಿ ರೂ (44 ಮಿಲಿಯನ್​ ಡಾಲರ್)​ ಲೂಟಿ ಮಾಡಿದ್ದಾರೆ.

ಈ ಕುರಿತು ಕಂಪನಿಯ ಸಾರ್ವಜನಿಕ ನೀತಿ ಹಾಗೂ ಸರ್ಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ಹರ್ದೀಪ್ ಸಿಂಗ್ ಅವರು ನೀಡಿರುವ ದೂರಿನ ಆಧಾರದಲ್ಲಿ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ತಮ್ಮ ಉದ್ಯೋಗಿ ರಾಹುಲ್​ ಅಗರ್ವಾಲ್​ ಎಂಬವರಿಗೆ ಕೆಲಸ ಮಾಡಲು ಕಂಪನಿ ಲ್ಯಾಪ್​ಟಾಪ್​ ನೀಡಿತ್ತು. ಸೈಬರ್ ಕಳ್ಳರು ಈ ಲ್ಯಾಪ್​ಟಾಪ್‌ನ ವ್ಯಾಲೆಟ್​​ ಹ್ಯಾಕ್​ ಮಾಡಿದ್ದಾರೆ.ಇಷ್ಟು ದೊಡ್ಡ ಮೊತ್ತ ವಂಚನೆಯಾಗಿರುವುದು ಬೆಳಕಿಗೆ ಬಂದ ತಕ್ಷಣ ಕಂಪನಿ ಆಂತರಿಕ ತನಿಖೆ ನಡೆಸಿದೆ. ಈ ವೇಳೆ, ರಾಹುಲ್​ ಅಗರ್ವಾಲ್​ ಅವರು ಕಂಪನಿ ಲ್ಯಾಪ್​ಟಾಪ್​ ಅನ್ನು ಮತ್ತೊಂದು ಪಾರ್ಟ್​​ಟೈಂ ಉದ್ಯೋಗಕ್ಕೆ ಬಳಸಿರುವುದು ಗೊತ್ತಾಗಿದೆ.

ಕಳೆದ ಒಂದು ವರ್ಷದಿಂದ ಪಾರ್ಟ್​ಟೈಮ್​ ಉದ್ಯೋಗದ ಮೂಲಕ ಅಗರ್ವಾಲ್ 15 ಲಕ್ಷ ರೂ ಸಂಪಾದಿಸಿರುವುದೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈತನೇ ಬೇರೆ ವ್ಯಕ್ತಿಗಳೊಂದಿಗೆ ಸೇರಿ ಈ ವಂಚನೆ ಎಸಗಿರುವ ಸಾಧ್ಯತೆ ಇದೆ ಎಂದು ಕಂಪನಿ ದೂರಿನಲ್ಲಿ ತಿಳಿಸಿದೆ.

ಉದ್ಯೋಗಿ ವಶಕ್ಕೆ:

ನೆಬಿಲೋ ಟೆಕ್ನಾಲಜೀಸ್​ ಪ್ರೈವೇಟ್​ ಲಿಮಿಟೆಡ್​ನಲ್ಲಿ ರಾಹುಲ್​ ಅಗರ್ವಾಲ್​ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆತನ ಲ್ಯಾಪ್​ಟಾಪ್​ನಿಂದ ಕಂಪನಿಯ ಕ್ರಿಪ್ಟೋ ಕರೆನ್ಸಿ ವರ್ಗಾವಣೆಯಾಗಿರುವ ಕಾರಣ ಆತನನ್ನು ವಶಕ್ಕೆ ಪಡೆಯಲಾಗಿದೆ.

ಸೈಬರ್​ ವಂಚನೆ ಪ್ರಕರಣದಲ್ಲಿ ಆತನ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ” ಎಂದು ರಮೇಶ್ ಬಾನೋತ್ ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments