ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತ ಹೇಳ್ತಾರೆ. ಆದರೆ ಬೀದರ್ ಜಿಲ್ಲೆಯ ಔರಾದ್ ನಲ್ಲಿ ಹೆಂಡತಿಯೇ ಗಂಡನ ಕೊಲೆ ಮಾಡುವುದರೊಂದಿಗೆ ಜಗಳ ಅಂತ್ಯವಾದ ವಿಚಿತ್ರ ಘಟನೆ ನಡೆದಿದೆ.
ಔರಾದ್ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಪತ್ನಿ ಸವಿತಾ ಜೋಜನೆ ಪತಿ ಸಿದ್ದರಾಮೇಶ್ವರ ಜೋಜನೆ ಬಾಚೇಪಳ್ಳಿ (28) ಕೊಲೆ ಮಾಡಿದ್ದಾರೆ.
ಕಳೆದ 5 ವರ್ಷದ ಹಿಂದೆಯಷ್ಟೇ ಕೂಗಳತೆಯ ದೂರದ ಗ್ರಾಮವಾದ ಲಾಧಾ ಗ್ರಾಮದ ನಿವಾಸಿ ಶಿಶಿಕಾಂತ ಎಂಪಳ್ಳೆ ಅವರ ಮಗಳಾದ ಸವಿತಾ ಜತೆಗೆ ಪ್ರೀತಿಸಿ ಮಾದುವೆಯಾಗಿದ್ದ.
ಅನೇಕ ಬಾರಿ ಸವಿತಾ ಮತ್ತು ಮೃತ ಸಿದ್ದರಾಮೇಶ್ಚರ ಮಧ್ಯೆ ಜಗಳವಾಗಿವೆ. ಮಂಗಳವಾರ ಮನೆಯಲ್ಲಿ ಜೋರು ಗಲಾಟೆ ನಡೆದಿದೆ ಎನ್ನಲಾಗಿದ್ದು, ಇದರಿಂದ ಸಿದ್ದರಾಮೇಶ್ಚರ ಅವರ ತಂದೆ ಶಿವರಾಜ ಜೋಜನೆ ಮನೆಗೆ ಬಂದು ಇಬ್ಬರಿಗೂ ಬುದ್ಧಿ ಹೇಳಿದ್ದರಂತೆ. ಆದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಈ ಗಲಾಟೆ ಜೋರಾಗಿದೆ. ಪತ್ನಿ ಸವಿತಾ ಜೋಜನೆ, ಅವಳು ತಾಯಿ ವಿಜಯಲಕ್ಷ್ಮೀ ಎಂಪಳ್ಳೆ, ತಂದೆ ಶಿವಕಾಂತ ಎಂಪಳ್ಳೆ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ.
ಜಗಳ ವಿಕೋಪಕ್ಕೆ ಹೋಗಿ ಪತಿ ಸಿದ್ದರಾಮೇಶ್ಚರ ಮೇಲೆ ಪತ್ನಿ ಸವಿತಾ, ಅತ್ತೆ ವಿಜಯಲಕ್ಷ್ಮೀ, ಮಾವ ಶಶಿಕಾಂತ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಸಿದ್ದರಾಮೇಶ್ಚರ ತೀವ್ರ ರೀತಿಯಲ್ಲಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೃತನ ತಂದೆ ಶಿವರಾಜ ಜೋಜನೆ ನೀಡಿದ ದೂರಿನ ಮೇರೆಗೆ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ ಐ ನಂದಕುಮಾರ ಮೂಳೆ ತಿಳಿಸಿದ್ದಾರೆ.


