Thursday, December 25, 2025
Google search engine
Homeಅಪರಾಧ15 ಲಕ್ಷ ರೂ. ಪರಿಹಾರ ಮೊತ್ತಕ್ಕಾಗಿ ಪತಿ ಕೊಂದು ಹುಲಿ ಕೊಂದ ಕತೆ ಕಟ್ಟಿದ ಚಲಾಕಿ...

15 ಲಕ್ಷ ರೂ. ಪರಿಹಾರ ಮೊತ್ತಕ್ಕಾಗಿ ಪತಿ ಕೊಂದು ಹುಲಿ ಕೊಂದ ಕತೆ ಕಟ್ಟಿದ ಚಲಾಕಿ ಪತ್ನಿ!

ಪರಿಹಾರ ಮೊತ್ತ ಪಡೆಯುವುದಕ್ಕಾಗಿ ಪತಿಯನ್ನು ಹುಲಿ ದಾಳಿ ನಡೆಸಿ ಕೊಂದಿದೆ ಎಂದು ಕಥೆ ಕಟ್ಟಿದ ಚಲಾಕಿ ಪತ್ನಿ ಸಿಕ್ಕಿಬಿದ್ದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹುಣಸೂರು ಗ್ರಾಮಾಂತರ ಪೊಲೀಸರು ಮಳವಳ್ಳಿ ತಾಲೂಕು ಕದಂಪುರ ಗ್ರಾಮದ ನಿವಾಸಿ ವೆಂಕಟಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ಸಲ್ಲಾಪುರಿ (40) ಯನ್ನು ಬಂಧಿಸಿದ್ದಾರೆ.

ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ದೊರೆಯುವ 15 ಲಕ್ಷ ರೂ. ಪರಿಹಾರ ಮೊತ್ತ ಪಡೆಯಲು ಸಂಚು ರೂಪಿಸಿದ ಸಲ್ಲಾಪುರಿ, ಪತಿಯನ್ನು ಹತ್ಯೆಗೈದು ಹುಲಿ ಕೊಂದಿರುವ ಕಥೆ ಕಟ್ಟಿ ಪೊಲೀಸರನ್ನ ಯಾಮಾರಿಸಲು ಯತ್ನಿಸಿದ್ದಾಳೆ.

ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ತಂಡ ನಡೆಸಿದ ಖಡಕ್ ತೆನಿಖೆಯಲ್ಲಿ ಪತ್ನಿಯ ಸಂಚು ಬಯಲಾಗಿದೆ. ಪತಿಯನ್ನ ಹತ್ಯೆಗೈದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಘಟನೆ ಹಿನ್ನೆಲೆ

ದಂಪತಿಗೆ ಇಬ್ಬರು ಗಂಡು  ಮಕ್ಕಳಿದ್ದಾರೆ. ಹುಣಸೂರು ತಾಲೂಕಿನ ಹನಗೂಡು ಹೋಬಳಿಯ  ಚಿಕ್ಕಹೆಜ್ಜೂರಿನ ಹಾಡಿಯಲ್ಲಿ(ಇದು ನಾಗರಹೊಳೆ ಕಾಡಿಂಚಿನ ಲ್ಲಿರುವ ಜಮೀನು) ಬೆಂಗಳೂರಿನ ಬಿಡದಿಯ ಅರುಣ್, ರವಿ ಮತ್ತಿಬ್ಬರು ಸ್ನೇಹಿತರು ಸೇರಿ 4-10ಗುಂಟೆ ಜಮೀನನ್ನು ಖರೀದಿಸಿದ್ದರು.

ಜಮೀನನ್ನು ನೋಡಿಕೊಳ್ಳಲು ಈ ದಂಪತಿಗಳನ್ನು ನೇಮಿಸಿದ್ದರು. ಜೀವನದಲ್ಲಿ ಐಷಾರಾಮಿ ಕನಸು ಕಾಣುತ್ತಿದ್ದ ಈಕೆ ಸರ್ಕಾರದ ಯೋಜನೆಗಳಲ್ಲಿ ಹಣ ಪಡೆಯುವ ಉದ್ದೇಶಗಳನ್ನ ಇಟ್ಟುಕೊಂಡು ಆಗಾಗ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಳು.

ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟರೆ 15 ಲಕ್ಷ ಪರಿಹಾರ ದೊರೆಯವ ಯೋಜನೆಯ ಮಾಹಿತಿ ಈಕೆಗೆ ದೊರೆತಿದೆ. ಪತಿಯನ್ನು ಕೊಲೆಗೈಯ್ಯುವ ಸ್ಕೆಚ್ ತಯಾರಿಸಿದ ಸಲ್ಲಾಪುರಿ ಕಳೆದ ಮಂಗಳವಾರ ಪತ್ನಿಗೆ ವಿಷ ಹಾಕಿ ಕೊಂದಿದ್ದಾಳೆ.ನಂತರ ಮನೆಯಿಂದ ಮೃತದೇಹವನ್ನ ಹೊರಕ್ಕೆ ಎಳೆದೊಯ್ದು ವಿರೂಪಗೊಳಿಸಿ ಗುಂಡಿಯಲ್ಲಿ ಮುಚ್ಚಿಹಾಕಿ ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟಂತೆ ಬಿಂಬಿಸಿದ್ದಾಳೆ.

ನಂತರ ಠಾಣೆಗೆ ಆಗಮಿಸಿ ಪತಿ ನಾಪತ್ತೆಯಾದ ಬಗ್ಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದಾಳೆ. ದೂರಿನಲ್ಲಿ ಹುಲಿ ಎಳೆದೊಯ್ದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಸಲ್ಲಾಪುರಿ ಮಾತನ್ನ ನಂಬಿದ ಪೊಲೀಸರು. ಸ್ಥಳಕ್ಕೆ ಹೋಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಹುಡುಕಾಟ ನಡೆಸಿದ್ದಾರೆ.

ಹುಲಿ ದಾಳಿ ನಡೆಸಿದ ಯಾವುದೇ ಕುರುಹುಗಳು ಪೊಲೀಸರಿಗೆ ಸಿಕ್ಕಿಲ್ಲ .ಮಳೆ ಸುರಿದ ಕಾರಣ ಕುರುಹುಗಳು ನಾಶವಾಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ .ಆದರೆ ಸಿಸಿ ಕ್ಯಾಮರಾದಲ್ಲಿ ಕೇವಲ ಪತ್ನಿ ಸಲ್ಲಾಪುರಿ ಮಾತ್ರ ಓಡಾಡಿರುವುದು ಕಂಡು ಬಂದಿದೆ. ಇನ್ ಸ್ಪೆಕ್ಟರ್ ಮುನಿಯಪ್ಪ ರವರು ಸಲ್ಲಾಪುರಿಯನ್ನು ತಿರ್ವ ವಿಚಾರಣೆಗೆ ಒಳಪಡಿಸಿದಾಗ ವಿಷ ಕೊಟ್ಟು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ಸಿಗುವ 15 ಲಕ್ಷ ಪರಿಹಾರ ಹಣ ಪಡೆಯುವ ಹುನ್ನಾರದಿಂದ ಕೃತ್ಯ ನಡೆಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ಡಿವೈಎಸ್ಪಿ ಗೋಪಾಲ ಕೃಷ್ಣ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮುನಿಯಪ್ಪ, ರಾಧಾ, ಮಂಜು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments