Thursday, December 25, 2025
Google search engine
Homeಅಪರಾಧದಾವಣೆಗೆರೆ: 55 ವರ್ಷದ ಅತ್ತೆ ಜೊತೆ 25 ವರ್ಷದ ಅಳಿಯ ಪರಾರಿ!

ದಾವಣೆಗೆರೆ: 55 ವರ್ಷದ ಅತ್ತೆ ಜೊತೆ 25 ವರ್ಷದ ಅಳಿಯ ಪರಾರಿ!

ಮದುವೆ ಆಗಿ ಎರಡು ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಪತ್ನಿಯ 55 ವರ್ಷದ ಮಲತಾಯಿ ಜೊತೆ 25 ವರ್ಷ ಅಳಿಯ ಪರಾರಿಯಾಗಿರುವ ವಿಲಕ್ಷಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಮುದ್ದೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ 25 ವರ್ಷದ ಅಳಿಯ ಗಣೇಶ್ ಹಾಗೂ 55 ವರ್ಷದ ಅತ್ತೆ ಶಾಂತಾ ಜೊತೆ ಪರಾರಿಯಾಗಿದ್ದು, ಪತ್ನಿ ಹೇಮಾ ಈ ಆಘಾತಕಾರಿ ಘಟನೆಯಿಂದ ಕಂಗಾಲಾಗಿದ್ದಾಳೆ.

ಹೇಮಾ ಅವರ ತಂದೆ ನಾಗರಾಜ್ 13 ವರ್ಷಗಳ ಹಿಂದೆ ಶಾಂತಾ ಎರಡನೇ ಮದುವೆ ಆಗಿದ್ದರು. ಹೇಮಾಳ ಮಲತಾಯಿಯಾದ ಶಾಂತಾ ಜೊತೆ ಅಕ್ರಮ ಸಂಬಂಧ ಬೆಳೆಸಿದ ಗಣೇಶ್, ಪತ್ನಿಯನ್ನು ಬಿಟ್ಟು ಅತ್ತೆ ಜೊತೆ ಚಿನ್ನಾಭರಣಗಳ ಜೊತೆ ಪರಾರಿಯಾಗಿದ್ದಾನೆ.

2 ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶ ಜೊತೆ ಹಿರಿಯ ಮಗಳು ಹೇಮಾ ಜೊತೆ ನಾಗರಾಜ್‌ ವಿವಾಹ ಮಾಡಿದ್ದರು.

ಮದುವೆ ಮಾಡಿಕೊಟ್ಟ15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಮನೆಯವರ ಗಮನಕ್ಕೆ ಬಂದಿದೆ. ಗಣೇಶ್ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ ಹೇಮಾ ನೋಡಿದ್ದಾರೆ.

ತಕ್ಷಣ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಫಾರ್ವರ್ಡ್‌ ಮಾಡಿದ್ದರು. ಮನೆಯವರಿಗೆ ಈ ವಿಷಯ ತಿಳಿಯಿತು ಎಂದು ಗೊತ್ತಾಗುತ್ತಿದ್ದಂತೆ ಗಣೇಶ್ ಚಿನ್ನಾಭರಣಗಳ ಸಮೇತ ಹೇಮಾಳ ಜೊತೆ ಬಸ್ ನಿಲ್ದಾಣಕ್ಕೆ ಬಂದಿದ್ದು, ಪತ್ನಿಯನ್ನು ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಶಾಂತಾ ಜೊತೆ ಪರಾರಿಯಾಗಿದ್ದಾನೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments