Wednesday, December 24, 2025
Google search engine
Homeಅಪರಾಧ82 ವರ್ಷದ ವೃದ್ದೆಗೆ 1.16 ಕೋಟಿ ರೂ. ವಂಚಿಸಿದ ಸೈಬರ್‌ ವಂಚಕರು!

82 ವರ್ಷದ ವೃದ್ದೆಗೆ 1.16 ಕೋಟಿ ರೂ. ವಂಚಿಸಿದ ಸೈಬರ್‌ ವಂಚಕರು!

82 ವರ್ಷದ ವೃದ್ದೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 1.16 ಕೋಟಿ ರೂ. ವಂಚಿಸಿದ ಮೂವರು ಸೈಬರ್‌ ವಂಚಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ದೆಹಲಿ ನಿವಾಸಿಯಾಗಿರುವ ವೃದ್ದೆಯ ಪತಿ ಸರ್ಕಾರಿ ಉದ್ಯೊಗಿಯಾಗಿದ್ದು, ನಿಧನರಾಗಿದ್ದಾರೆ. ಒಬ್ಬಳು ಪುತ್ರಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ.

ವೃದ್ದೆಗೆ ನಕಲಿ ಅರೆಸ್ಟ್‌ ವಾರೆಂಟ್‌ ಪತ್ರ ತೋರಿಸಿದ ಸೈಬರ್‌ ವಂಚಕರು ನಿರಂತರ ಮಾನಸಿಕ ಒತ್ತಡ ಮತ್ತು ಕಾನೂನು ಕ್ರಮದ ಬೆದರಿಕೆಯೊಡ್ಡಿ ಬ್ಯಾಂಕ್‌ ಗೆ ಸ್ವತಃ ಮಹಿಳೆ ತೆರಳಿ 1.16 ಕೋಟಿ ರೂ. ಆರ್‌ ಟಿಜಿಎಸ್‌ ಮಾಡಿಸಿಕೊಂಡಿದ್ದಾರೆ.

ಆರೋಪಿಗಳು ಬಿಹಾರದ ಪಾಟ್ನಾ ಮೂಲದವರಾಗಿದ್ದು, ನಳಂದ ಜಿಲ್ಲೆಯ ಪ್ರಭಾಕರ್ ಕುಮಾರ್ (27), ಬಿಹಾರದ ವೈಶಾಲಿ ಜಿಲ್ಲೆಯ ರೂಪೇಶ್ ಕುಮಾರ್ ಸಿಂಗ್ (37) ಮತ್ತು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ದೇವ್ ರಾಜ್ (46) ಅವರನ್ನು ಬಂಧಿಸಲಾಗಿದೆ.

ಬಂಧಿತರು ಸೈಬರ್‌ ವಂಚನೆಯ ಸಿಂಡಿಕೇಟ್‌ ಸದಸ್ಯರಾಗಿದ್ದಾರೆ. ಇವರು ಮೊದಲ ಹಂತವಾಗಿ ೧.೧೦ ಕೋಟಿ ರೂ.ವನ್ನು ಹಿಮಾಚಲ ಪ್ರದೇಶದ ಎನ್‌ ಜಿಒ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ಅಪರಾಧ) ಆದಿತ್ಯ ಗೌತಮ್ ಹೇಳಿದ್ದಾರೆ.

ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ನಲ್ಲಿ ಒಂದೇ ಬ್ಯಾಂಕ್ ಖಾತೆಯ ವಿರುದ್ಧ ಸುಮಾರು 32 ದೂರುಗಳು ದಾಖಲಾಗಿದ್ದು, ಒಟ್ಟಾರೆ ಸುಮಾರು 24 ಕೋಟಿ ರೂ. ವಂಚನೆ ನಡೆದಿದೆ. ಆರೋಪಿಗಳಿಂದ ೧೭ ಲಕ್ಷ ರೂ. ಹಣ ವರ್ಗಾವಣೆ ತಡೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಪ್ರಭಾಕರ್ ಕುಮಾರ್ ಸಹ ಆರೋಪಿ ದೇವ್ ರಾಜ್ ಅವರ ಮೊಬೈಲ್ ಫೋನ್‌ನಲ್ಲಿ ದುರುದ್ದೇಶಪೂರಿತ APK ಫೈಲ್ ಆಪ್‌ ಹೊಂದಿದ್ದಾರೆ. ಈ ಆಪ್‌ ಮೂಲಕ ವಂಚನೆಗೊಳಗಾದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸಿಮ್ ಕಾರ್ಡ್‌ ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ.

ಇಂಟರ್ನೆಟ್ ಆಧಾರಿತ ವರ್ಚುವಲ್ ಸಂಖ್ಯೆಗಳ ಮೂಲಕ ಸೈಬರ್ ವಂಚಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ, ನಗದು ಕಮಿಷನ್‌ಗಳನ್ನು ಪಡೆದರು, ಆದಾಯವನ್ನು ಸಹಚರರ ನಡುವೆ ವಿತರಿಸಿದರು ಮತ್ತು ಅವರ ಪಾತ್ರಕ್ಕಾಗಿ ಗಣನೀಯ ಪಾಲನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಎನ್‌ಜಿಒ ನಡೆಸುತ್ತಿರುವ ದೇವ್ ರಾಜ್, ಅಧಿಕೃತ ಸಹಿದಾರರಾಗಿರುವ ತನ್ನ ತಂದೆ ವೇದ್ ಪ್ರಕಾಶ್ ಜೊತೆ ಸೇರಿ ಎನ್‌ಜಿಒ ಹೆಸರಿನಲ್ಲಿ ಕರೆಂಟ್ ಖಾತೆ ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಸುಲಭ ಹಣಕ್ಕಾಗಿ, ಅವರು ಖಾತೆಯನ್ನು ಬಿಹಾರದ ರೂಪೇಶ್ ಕುಮಾರ್‌ಗೆ ಹಸ್ತಾಂತರಿಸಿದ್ದಾರೆ ಎಂದು ಅವರು ಹೇಳಿದರು.

ದೇವ್ ರಾಜ್ ಇಂಟರ್ನೆಟ್ ಬ್ಯಾಂಕಿಂಗ್ ರುಜುವಾತುಗಳು ಮತ್ತು ಒಟಿಪಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಹಿವಾಟುಗಳನ್ನು ನಿರ್ವಹಿಸಲು ಪಾಟ್ನಾಗೆ ಪ್ರಯಾಣಿಸಿದ್ದಾರೆ ಮತ್ತು ವಂಚನೆಯ ಆದಾಯದಿಂದ ಕಮಿಷನ್ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments