ಪತ್ನಿ ತೊರೆದ ಸಿಟ್ಟಿಗೆ ಇಬ್ಬರು ಅಂಗವಿಕಲ ಮಕ್ಕಳನ್ನು ಕೊಂದ ತಂದೆ ನಂತರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾದ್ರಾ ಮತ್ತು ನಗರ ಹವೇಲಿಯಲ್ಲಿ ನಡೆದಿದೆ.
ದಮನ್ ಮತ್ತು ಡಿಯು ಕೇಂದ್ರಾಡಳಿತ ಪ್ರದೇಶದ ಸಿಲ್ವಾಸ್ಸಾದಲ್ಲಿ ಪತ್ನಿ ತನ್ನನ್ನು ತೊರೆದಿದ್ದಕ್ಕೆ 18 ವರ್ಷದ ಜಯ್ ಮತ್ತು 10 ವರ್ಷದ ಆರ್ಯ ಅವರನ್ನು ಕೊಂದ ತಂದೆ ಸುನೀಲ್ ಭಕರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಗಡ್ ಮೂಲದ ಕುಟುಂಬ ಕಳೆದ ಎರಡು ದಶಕಗಳಿಂದ ಸಿಲ್ವಾಸ್ಸಾದ ಸಮರವರ್ಣಿ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.
ಶುಕ್ರವಾರ ಸುನಿಲ್ ಭಕರೆ (56) ಇಬ್ಬರು ಮಕ್ಕಳನ್ನುಹಗ್ಗದಿಂದ ಕತ್ತು ಹಿಸುಕಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಿಲ್ವಾಸ್ಸಾ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅನಿಲ್ ಟಿಕೆ ತಿಳಿಸಿದ್ದಾರೆ.
ಆರಂಭದಲ್ಲಿ ಇಬ್ಬರು ಮಕ್ಕಳಿಗೆ ವಿಷ ನೀಡಿ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತೋರುತ್ತದೆ. ಅವನ ಹೆಂಡತಿ ಎರಡು ವಾರಗಳ ಹಿಂದೆ ಅವನನ್ನು ತೊರೆದಿದ್ದಳು ಮತ್ತು ಅವನು ತನ್ನ ಮಕ್ಕಳನ್ನು ನೋಡಿಕೊಳ್ಳಬೇಕಾಗಿತ್ತು. ಇದರಿಂದ ನೊಂದ ಆತ ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.


