Thursday, December 25, 2025
Google search engine
Homeಅಪರಾಧಮೈಸೂರಿನಲ್ಲಿ ಹುಟ್ಟಿದ 2 ಹೆಣ್ಣು ಮಕ್ಕಳ ಕತ್ತುಕೊಯ್ದು ಕೊಂದು ತಾಯಿ ಆತ್ಮಹತ್ಯೆ

ಮೈಸೂರಿನಲ್ಲಿ ಹುಟ್ಟಿದ 2 ಹೆಣ್ಣು ಮಕ್ಕಳ ಕತ್ತುಕೊಯ್ದು ಕೊಂದು ತಾಯಿ ಆತ್ಮಹತ್ಯೆ

ಹುಟ್ಟಿದ ಎರಡನೇ ಮಗುವೂ ಹೆಣ್ಣು ಎಂಬ ಕಾರಣಕ್ಕೆ ತಾಯಿ ಎರಡು ಹೆಣ್ಣು ಮಕ್ಕಳ ಕತ್ತುಕೊಯ್ದು ಕೊಲೆ ಮಾಡಿ ನಂತರ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ  ಗ್ರಾಮದಲ್ಲಿ 9 ದಿನದ ಮಗು ಮತ್ತು ಎರಡು ವರ್ಷದ ಅನಮ್ ಫಾತಿಮಾ ಮಗುವನ್ನು ಕೊಂದು ತಾಯಿ ಅರ್ಬಿಯಾ  ಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರ್ಬಿಯಾಳನ್ನು ಕಳೆದ ಮೂರು ವರ್ಷಗಳ ಹಿಂದೆ ಅರೇನಹಳ್ಳಿ ಸೈಯದ್ ಮುಸಾವೀರ್ ಎಂಬುವವರು ವಿವಾಹ ಮಾಡಿದ್ದು, ಎರಡನೇ ಮಗುವಿನ ಹೆರಿಗೆ ಗೆಂದು ತನ್ನ ತಾಯಿಯ ಮನೆಯಾದ ಬೆಟ್ಟದಪುರಕ್ಕೆ ಬಂದಿದ್ದರು.

ಕಳೆದ 9 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದ್ದು ತಾ00000ಯಿಯ ಮನೆಯಲ್ಲಿಯೇ ಇದ್ದರು. ಶನಿವಾರ ಬೆಳಿಗ್ಗೆ ರೂಮಿನ ಒಳಗಡೆ ಹೋಗಿ 8 ದಿನಗಳ ಹಸು ಗೂಸನ್ನು ಮತ್ತು ಎರಡು ವರ್ಷದ ಅನಮ್ ಫಾತಿಮಾ ಮಗುವಿನ ಕತ್ತನ್ನು ಕುಯ್ದು ತಾನು ಕೂಡ ಕತ್ತು ಕುಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಂತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆ ವಿವರಗಳನ್ನು ಪಡೆದುಕೊಂಡರು ನಂತರ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ಮಾತನಾಡಿ ಸ್ಥಳ ಪರಿಶೀಲನೆ ಮಾಡಿದಾಗ ಬಾಗಿಲನ್ನು ಹಾಕಿಕೊಂಡು ಎಂಟು ದಿನದ ಮಗು ಮತ್ತು ಮೂರು ವರ್ಷದ ಮಗುವನ್ನು ಸಾಯಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಿ ಸತ್ಯ ಅಸತ್ಯತೆಯನ್ನು ತಿಳಿಯಲಾಗುವುದು ಎಂದು ತಿಳಿಸಿದರು.

ಘಟನೆ ಬಗ್ಗೆ ಮೃತಳ ತಂದೆ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ನನ್ನ ಮಗಳಿಗೆ ಮೊದಲನೇ ಮಗು ಅಂಗವಿಕಲೆಯಾಗಿದ್ದು ನಂತರ ಹುಟ್ಟಿದ್ದು ಕೂಡ ಹೆಣ್ಣು ಮಗುವಾಗಿದ್ದು ಈ ಬಗ್ಗೆ ಬೇಸರಗೊಂಡು ಈ ಕೃತ್ಯವೆಸಗಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಇಲಾಖೆ ತನಿಖೆ ಮುಂದುವರೆಸುತ್ತಿದ್ದಾರೆ.

ಈ ವೇಳೆ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ, ವೃತ್ತ ನಿರೀಕ್ಷಕ ದೀಪಕ್, ಬೆಟ್ಟದಪುರ ಠಾಣೆಯ ಆರಕ್ಷಕ ಉಪನಿರೀಕ್ಷಕ ಅಜಯ್ ಕುಮಾರ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments