ನೀನೇ ಸಾಕಿದ ಗಿಣಿ ನಿನ್ನ ಮುದ್ದಿನ ಗಿಣಿ.. ಹದ್ದಾಗಿ ಕುಕ್ಕಿತ್ತಲೋ ಎಂಬ ಹಾಡಿನಂತೆ ಲಾರಿ ಓಡಿಸುವ ಸಣ್ಣ ಕೆಲಸ ಮಾಡುತ್ತಿದ್ದರೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿದ ಪತ್ನಿ ಪರಸಂಗ ಮಾಡಿದಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ.
ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ನೆಲೆಸಿದ್ದ ಲಾರಿ ಮಾಲೀಕ 45 ವರ್ಷದ ಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
೨ ವರ್ಷಗಳ ಹಿಂದೆ ಸ್ವಾಮಿ ಪತ್ನಿ ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ರಿಜಿಸ್ಟರ್ ಆಗಿದ್ದ ಮೈಲಾರಪ್ಪ ಜೊತೆ ಸಂಬಂಧ ಬೆಳೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೈಲಾರಾಪ್ಪ ಅವರ ಪತ್ನಿ ಸ್ವಾಮಿ ಮನೆಗೆ ಬಂದು ಆತನ ಪತ್ನಿಗೆ ಬುದ್ಧಿ ಹೇಳಿ ಹೋಗಿದ್ದರು. ಆದರೆ ಆಕೆ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗದ ಹಿನ್ನೆಲೆಯಲ್ಲಿ ಪತಿ ಸ್ವಾಮಿ ಬೇಸತ್ತು ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
2005-06ರಲ್ಲಿ ಸೋಮಶೇಖರ್ ಪವಿತ್ರಾಳನ್ನು ವಿವಾಹವಾಗಿದ್ದರು. ಪಿಯುಸಿ ಮಗಿಸಿದ್ದ ಪವಿತ್ರಾಳನ್ನು ಸ್ವಾಮಿ ಕಾಲೇಜಿಗೆ ಸೇರಿಸಿ ಬಿಕಾಂ ಓದಿಸಿದ್ದರು. ನಂತರ ಪವಿತ್ರಾ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು.
ಬೆಂಗಳೂರು ವಿವಿ ಉಪಕುಲಪತಿ (ರಿಜಿಸ್ಟ್ರಾರ್) ಆಗಿದ್ದ ಮೈಲಾರಪ್ಪ ಪವಿತ್ರಾಳಿಗೆ ಹಣದಾಸೆ ತೋರಿಸಿ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.