ಪ್ರೀತಿಯ ನಾಟಕವಾಡಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಎಸಗಿದ ಮೂವರನ್ನು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ರಾಮನಗರ ಸಮೀಪದ ಮಾಗಡಿಯಲ್ಲಿ ನಡೆದಿದೆ.
ಮಾಗಡಿಯಲ್ಲಿ ಅಕ್ಟೋಬರ್ ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನಲ್ಲಿ 19 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಅತ್ಯಾಚಾರ ಎಸಗಿದ ಸ್ಥಳೀಯ ನಿವಾಸಿಗಳಾದ ವಿಕಾಸ್, ಪ್ರಶಾಂತ್ ಮತ್ತು ಚೇತನ್ ಅವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಇಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದರೆ, ಒಬ್ಬ ಎಲೆಕ್ಟ್ರಿಷಿಯನ್ ಆಗಿದ್ದಾನೆ.
ಆರು ತಿಂಗಳ ಹಿಂದೆ ಪ್ರಮುಖ ಆರೋಪಿ ವಿಕಾಸ್, ಕಾಲೇಜು ವಿದ್ಯಾರ್ಥಿನಿಯ ಸಂಪರ್ಕಕ್ಕೆ ಬಂದಿದ್ದ. ನಂತರ ಇಬ್ಬರ ನಡುವಿನ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಭರವಸೆ ನೀಡಿದ್ದ ಆರೋಪಿ, ಯುವತಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಇದರ ಜೊತೆಗೆ ಕೃತ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಈ ವಿಡಿಯೋವನ್ನು ಸಹ ಆರೋಪಿಗಳಾಗಿರುವ ತನ್ನ ಸ್ನೇಹಿತರಿಗೂ ತೋರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಸತತವಾಗಿ ಓರ್ವ ಆರೋಪಿ ಸಂತ್ರಸ್ತ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಆಕೆಯೊಂದಿಗಿನ ಫೋಟೋಗಳನ್ನು ತೆಗೆದುಕೊಂಡು ಬೆದರಿಕೆ ಹಾಕಿದ್ದಾನೆ. ನಂತರ ಅದನ್ನೇ ಬಂಡವಾಳ ಮಾಡಿಕೊಂಡು ಮತ್ತೆ ಯುವತಿಯನ್ನು ಬೆದರಿಸಿದ ಆತ, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.
ಆ ಬಗ್ಗೆ ಯುವತಿ ದೂರು ನೀಡಿರುವುದರಿಂದ ಆರೋಪಿಗಳನ್ನು ಬಂಧಿಸಿದ್ದೇವೆ. ಸಂತ್ರಸ್ತೆ ಹಾಗೂ ಆರೋಪಿಗಳೆಲ್ಲರೂ ಒಂದೇ ಕಾಲೊನಿಯ ನಿವಾಸಿಗಳು. ಆರೋಪಿಗಳಲ್ಲಿ ಓರ್ವ ಕೆಲಸ ಮಾಡುತ್ತಿದ್ದು, ಉಳಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳು. ಸಂತ್ರಸ್ತ ಯುವತಿಗೆ ಕೌನ್ಸಿಲಿಂಗ್ಗೆ ಏರ್ಪಾಡು ಮಾಡಿದ್ದೇವೆ” ಎಂದು ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು.


