Thursday, November 21, 2024
Google search engine
Homeತಾಜಾ ಸುದ್ದಿಸದ್ಗುರು ಜಗ್ಗಿ ವಾಸುದೇವ್ ಮೇಲೆ ಕ್ರಿಮಿನಲ್ ಕೇಸ್: ಇಶಾ ಫೌಂಡೇಶನ್ ಮೇಲೆ ಪೊಲೀಸರ ದಾಳಿ

ಸದ್ಗುರು ಜಗ್ಗಿ ವಾಸುದೇವ್ ಮೇಲೆ ಕ್ರಿಮಿನಲ್ ಕೇಸ್: ಇಶಾ ಫೌಂಡೇಶನ್ ಮೇಲೆ ಪೊಲೀಸರ ದಾಳಿ

ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಮೇಲಿನ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಕುರಿತು ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಡಿದ ಸೂಚನೆ ಮೇರೆಗೆ ಮಂಗಳವಾರ ತಮಿಳುನಾಡಿನ ತೊಂಡಮುತ್ತೂರಿನಲ್ಲಿರುವ ಇಶಾ ಫೌಂಡೇಶನ್‌ ಆಶ್ರಮದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿ, ಮೂವರು ಡಿಎಸ್‌ಪಿಗಳ ನೇತೃತ್ವದಲ್ಲಿ 150 ಪೊಲೀಸರ ಬೃಹತ್ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ತನ್ನ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ (42) ಮತ್ತು ಲತಾ ಕಾಮರಾಜ್ (39) ಅವರನ್ನು ಬಲವಂತವಾಗಿ ಫೌಂಡೇಶನ್‌ನಲ್ಲಿ ಇರಿಸಲಾಗಿದೆ. ಇಶಾ ಫೌಂಡೇಶನ್ ಜನರನ್ನು ಮಾನಸಿಕವಾಗಿ ನಿಯಂತ್ರಿಸಿ ಅವರನ್ನು ಸನ್ಯಾಸಿಗಳನ್ನಾಗಿ ಮಾಡಿ ಅವರ ಕುಟುಂಬದೊಂದಿಗೆ ಸಂಪರ್ಕವನ್ನು ಮುರಿದುಕೊಳ್ಳುವಂತೆ ಮಾಡುತ್ತಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಕಾಮರಾಜ್ ದೂರಿನ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ವಿಚಾರಣೆ ಸಂದರ್ಭದಲ್ಲಿ, ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಮತ್ತು ವಿ.ಶಿವಗಣನಂ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ತಮ್ಮ ಮಗಳಿಗೆ ಮದುವೆ ಮಾಡಿ ಸುಖಮಯ ಜೀವನ ನೀಡಿದ ಸದ್ಗುರು ಜಗ್ಗಿ ವಾಸುದೇವ್ ಇತರ ಯುವತಿಯರಿಗೆ ತಲೆ ಬೋಳಿಸಿಕೊಂಡು ಸನ್ಯಾಸತ್ವದ ಜೀವನ ನಡೆಸುವಂತೆ ಯಾಕೆ ಪ್ರೇರೇಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದೆ.

ಹೆಣ್ಣುಮಕ್ಕಳ ವೃತ್ತಿಪರ ಸಾಧನೆಗಳನ್ನು ಸಹ ಉಲ್ಲೇಖಿಸಿರುವ ಪ್ರಾಧ್ಯಾಪಕರು, ಹಿರಿಯ ಮಗಳು ಇಂಗ್ಲೆಂಡ್ ನ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಮೆಕಾಟ್ರಾನಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2008ರಲ್ಲಿ ಪತಿಯಿಂದ ವಿಚ್ಛೇದನ ಪಡೆದ ನಂತರ ಇಶಾ ಫೌಂಡೇಶನ್‌ನಲ್ಲಿ ಯೋಗ ತರಗತಿಯಲ್ಲಿ ಪಾಲ್ಗೊಂಡರು. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕಿರಿಯ ಮಗಳು ಸಹ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರ ಮನಸ್ಸನ್ನು ಬದಲಾಸಿದ್ದು ಮುಂದೆ ಅವರು ತಮ್ಮ ಕುಟುಂಬದೊಂದಿಗಿನ ಸಂಪರ್ಕವನ್ನು ಕಳೆದುಕೊಂಡರು ಎಂದು ಪ್ರಾಧ್ಯಾಪಕರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments