Thursday, November 21, 2024
Google search engine
Homeಜ್ಯೋತಿಷ್ಯದಿನ ಭವಿಷ್ಯ ಮೇ 21, 2024: ಈ ರಾಶಿಯವರಿಗೆ ಮನಸ್ಸಿಗೆ ಸಂತೋಷವಾಗುವ ಬದಲಾವಣೆ ಆಗಲಿದೆ!

ದಿನ ಭವಿಷ್ಯ ಮೇ 21, 2024: ಈ ರಾಶಿಯವರಿಗೆ ಮನಸ್ಸಿಗೆ ಸಂತೋಷವಾಗುವ ಬದಲಾವಣೆ ಆಗಲಿದೆ!

ಮೇಷ

ಅನಾವಶ್ಯಕ ಖರ್ಚು ವೆಚ್ಚಗಳು ಬೇಸರ ಉಂಟುಮಾಡುತ್ತದೆ. ಮಕ್ಕಳಿಗೆ ವಿಶೇಷ ಗೌರವ, ಪ್ರತಿಷ್ಠೆ, ಪ್ರಶಸ್ತಿಗಳು ದೊರೆಯುತ್ತವೆ. ನಿಮ್ಮ ಮನದಲ್ಲಿ ಇರುವ ಆಸೆ ಆಕಾಂಕ್ಷೆಗಳು ಕೈ ಗೂಡಲಿವೆ. ಆದರೆ ಯಾವುದೇ ಕೆಲಸ ಕಾರ್ಯಗಳು ಹೆಚ್ಚಿನ ಪ್ರಯತ್ನವಿಲ್ಲದೆ ಸಫಲಗೊಳ್ಳುವುದಿಲ್ಲ. ಸಂಗಾತಿಯಿಂದ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಸಹಾಯ ಸಹಕಾರ ದೊರೆಯುತ್ತದೆ. ಹಣದ ಕೊರತೆ ಕಂಡು ಬರುವುದಿಲ್ಲ.

ವೃಷಭ

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಗಮನ ಸೆಳೆಯುವ ಕೆಲಸವೊಂದನ್ನು ಮಾಡುತ್ತಾರೆ. ನೆರೆಹೊರೆಯವರ ಪ್ರೀತಿ ವಿಶ್ವಾಸವು ನಿಮಗೆ ದೊರೆಯಲಿದೆ. ಯಾರನ್ನೂ ದ್ವೇಷಿಸದೆ ಪ್ರೀತಿಯಿಂದ ಕಾಣುವ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸ ನೀಡುವ ವರ್ತಮಾನವೊಂದು ಬರುತ್ತದೆ. ಹೊಸ ವಿಚಾರಗಳನ್ನು ಅಧ್ಯಯನ ಮಾಡುವ ಅವಕಾಶ ನಿಮ್ಮದಾಗಲಿದೆ.

ಮಿಥುನ

ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ನಿಮ್ಮ ವಿವಾಹ ನಿಶ್ಚಯವಾಗುತ್ತದೆ. ಸ್ವಂತ ಖರ್ಚು ವೆಚ್ಚಗಳಿಗಿಂತಲೂ ಬೇರೆಯವರಿಗೆ ಹಣ ಖರ್ಚು ಮಾಡುವುದೇ ಹೆಚ್ಚು. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವುದನ್ನು ಪ್ರಯತ್ನಿಸಿ. ದೇಹಾಲಸ್ಯದಿಂದ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧರಿಸುವಿರಿ. ನಿಮ್ಮ ಕೆಲಸ ಕಾರ್ಯಗಳನ್ನು ಸಂಗಾತಿಯು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.

ಕಟಕ

ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ವಾದ ವಿವಾದಗಳಲ್ಲಿ ತೊಡಗುವ ಬದಲು ಪ್ರೀತಿ ವಿಶ್ವಾಸದಿಂದ ಕೆಲಸ ಸಾಧಿಸಲು ಪ್ರಯತ್ನಿಸಿ. ನಿಮ್ಮಲ್ಲಿರುವ ಬುದ್ಧಿಗೆ ತಕ್ಕಂತಹ ಉದ್ಯೋಗವು ದೊರೆಯುತ್ತದೆ. ಕಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಮನಸ್ಸಿಗೆ ಮುದ ನೀಡುವ ವಸ್ತುಗಳನ್ನುಕೊಳ್ಳುವಿರಿ.

ಸಿಂಹ

ಸಂಪಾದಿಸಿದ ಹಣವನ್ನು ಹತ್ತಿರದ ಬಂಧುಗಳಿಗಾಗಿ ಖರ್ಚು ಮಾಡುವಿರಿ. ದಿನಾಂತ್ಯಕ್ಕೆ ಹಣದ ತೊಂದರೆ ಉಂಟಾಗುತ್ತದೆ. ಆತ್ಮೀಯರು ನಿಮ್ಮಲ್ಲಿನ ಒಳ್ಳೆಯ ಭಾವನೆಗಳಿಗೆ ಧಕ್ಕೆ ತರುತ್ತಾರೆ. ಸಂಗಾತಿ ಮಕ್ಕಳ ಸಹಾಯದಿಂದ ಕುಟುಂಬದಲ್ಲಿ ಶಾಂತಿ ನೆನೆಸುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಅನಾವಶ್ಯಕವಾಗಿ ವಾದ ವಿವಾದಗಳು ಇರುತ್ತದೆ.

ಕನ್ಯಾ

ಭವಿಷ್ಯದ ಉತ್ತಮ ದಿನಗಳಿಗಾಗಿ ಯೋಜನೆಗಳನ್ನು ರೂಪಿಸುವಿರಿ. ಸರಿ ಇಲ್ಲದ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಮನಸ್ಸಿಗೆ ಸಂತೋಷವಾಗುವಂತಹ ಬದಲಾವಣೆಗಳು ಉಂಟಾಗುತ್ತವೆ. ಅನಿವಾರ್ಯವಾಗಿ ಸಹೋದ್ಯೋಗಿಗಳ ಜವಾಬ್ದಾರಿಯನ್ನು ಪೂರೈಸಬೇಕಾಗುತ್ತದೆ. ಸ್ವಂತ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಲಿದೆ.

ತುಲಾ

ಉನ್ನತ ವಿದ್ಯಾಭ್ಯಾಸದ ಆಸೆ ಇದ್ದಲ್ಲಿ ಸಫಲತೆ ಗಳಿಸುತ್ತಾರೆ. ಅನಿರೀಕ್ಷಿತ ಧನ ಲಾಭಗಳು ನಿಮ್ಮದಾಗುತ್ತದೆ. ಸಮಾಜದ ಗೌರವಯುತ ಸ್ಥಾನವು ದೊರೆಯುತ್ತದೆ. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯಲಿದೆ. ಅನಾವಶ್ಯಕ ಚಿಂತೆಯಿಂದ ಹೊರ ಬರಲು ಧಾರ್ಮಿಕ ಚಿಂತನೆಗೆ ಒಳಗಾಗುವಿರಿ. ಸ್ನೇಹಿತರ ಸಹಾಯದಿಂದ ಉದ್ಯೋಗವನ್ನು ಬದಲಿಸುವಿರಿ. ಮನೆಯ ಅಂದವನ್ನು ಹೆಚ್ಚಿಸಲು ಕುಟುಂಬದ ಸದಸ್ಯರಿಗೆ ಸಹಾಯ ಮಾಡುವಿರಿ.

ವೃಶ್ಚಿಕ

ನಿಮ್ಮ ಮನದಲ್ಲೇ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವಿರಿ. ಸುತ್ತಮುತ್ತಲಿನ ಪರಿಸರದಲ್ಲಿ ನಿಮ್ಮಿಂದ ಸಂತೋಷದ ವಾತಾವರಣ ನಿರ್ಮಾಣವಾಗುತ್ತವೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ದುಡಿಯುವ ಸಮಯವನ್ನು ಪರಿಗಣಿಸದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಸಂಗಾತಿ ಸಹಾಯ ಮಾಡುತ್ತಾರೆ.

ಧನಸ್ಸು

ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸದೆ ಹೋದಲ್ಲಿ ಶುಭ ಫಲಗಳು ದೊರೆಯುತ್ತವೆ. ಆತ್ಮೀಯರಿಂದ ದೊರೆಯುವ ಅವಕಾಶವನ್ನು ನಿಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುವಿರಿ. ದಂಪತಿಗಳ ನಡುವೆ ಹೊಂದಾಣಿಕೆ ಇರುತ್ತದೆ. ನಿಮ್ಮದಲ್ಲದ ಹಣಕಾಸಿನ ವ್ಯವಹಾರಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಮಕರ

ಪ್ರಯತ್ನ ಪಟ್ಟಲ್ಲಿ ಇರುವ ಆದಾಯದಲ್ಲಿಯೇ ಹಣವನ್ನು ಉಳಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ವಿಶೇಷವಾದಂತಹ ಸಂಗತಿಗಳು ನಡೆಯಲಿವೆ. ಸಂತಾನ ಲಾಭವಿದೆ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಕಂಡು ಬರುತ್ತದೆ. ಆರೋಗ್ಯದ ಬಗ್ಗೆ ಗಮನ ವಹಿಸಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿ ಬಹಳ ಮುಖ್ಯವಾಗುತ್ತದೆ. ಮಕ್ಕಳೊಂದಿಗೆ ಮಮತೆಯಿಂದ ವರ್ತಿಸುವಿರಿ.

ಕುಂಭ

ಮೊದಲ ಆದ್ಯತೆಯನ್ನು ನಿಮ್ಮ ಸ್ವಂತ ಕೆಲಸಗಳಿಗೆ ನೀಡುವಿರಿ. ಸಮಯದ ಪರಿವಿಲ್ಲದೆ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಸಮಾಜ ಸೇವೆ ಮಾಡುವ ಅವಕಾಶ ದೊರೆಯುತ್ತದೆ. ಕುಟುಂಬದ ಹಿರಿಯರಿಗೆ ಸೇರಿದ ಭೂಮಿಯು ನಿಮ್ಮ ಪಾಲಾಗುತ್ತದೆ. ಸೋದರ ಮತ್ತು ತಂದೆಯ ನಡುವಿನ ಮನಸ್ತಾಪವು ದೂರವಾಗುತ್ತದೆ. ಅನಿವಾರ್ಯವಾಗಿ ವಾಸವಿರುವ ಮನೆಯನ್ನು ಬದಲಾವಣೆ ಮಾಡುವಿರಿ.

ಮೀನ ಸಂತೋಷಕೂಟಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮಗೆ ಅನುಕೂಲವಾಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯುತ್ತದೆ. ಆತ್ಮೀಯರ ಜೊತೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುವ ಅವಕಾಶ ಪಡೆಯುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments