ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ದಿನಕ್ಕೊಂದರಂತೆ 30 ಹಗರಣಗಳನ್ನು ಜನರ ಮುಂದೆ ಇಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆಯಿಂದ ಜೆಡಿಎಸ್ ಹಿಂದೆ ಸರಿದಿರುವುದು ರಾಜಕೀಯ ನಿಲುವು. ಇದಕ್ಕೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.
ಜೆಡಿಎಸ್ ಸಹಕಾರದಿಂದ ಬಿಜೆಪಿ 10 ಸೀಟು ಗೆದ್ದಿದೆ. ಮೈಸೂರು-ಮಂಡ್ಯ ಭಾಗದಲ್ಲಿ ಹಿಡಿತ ಹೊಂದಿರುವ ಜೆಡಿಎಸ್ ನಿಂದ ಬಿಜೆಪಿಗೆ ಹೆಚ್ಚು ಸ್ಥಾನ ಬಂದಿದೆ. ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ ಭಾಗದಲ್ಲಿ ಜನ ಇದ್ದಾರೆ. ಇಲ್ಲಿ ಬಿಜೆಪಿ ಅವರು ತಮಟೆ ಹೊಡೆಕೊಂಡು ಹೋದರೆ ಜೆಡಿಎಸ್ ಗೆ ತೊಂದರೆ ಅಲ್ವಾ ಎಂದು ಅವರು ಹೇಳಿದರು.
ಜೆಡಿಎಸ್ ಅನ್ನ ಬಿಜೆಪಿ ಜೊತೆ ವಿಲೀನ ಮಾಡಿಕೊಂಡ್ರೆ ಪರವಾಗಿಲ್ಲ. ಜೆಡಿಎಸ್ ಕುಮಾರಸ್ವಾಮಿ ಎರಡು ಅಸ್ತಿತ್ವ ಉಳಿಸಿಕೊಳ್ಳಬೇಕು ಅಲ್ಲ. ಹಾಗಾಗಿ ಜೆಡಿಎಸ್ ಪಾದಯಾತ್ರೆಗೆ ಕೈ ಜೋಡಿಸುತ್ತಿಲ್ಲ ಎಂದು ನನ್ನ ಅನಿಸಿಕೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಪಾದಯಾತ್ರೆ ನಾವು ಕೂಡ ರೆಡಿ ಆಗುತ್ತಿದ್ದೇವೆ. ಪೆನ್ ಡ್ರೈವ್ ವಿಚಾರ ಈಗ ಬೇಡ. ಪಾದಯಾತ್ರೆ ಕೌಂಟರ್ ಕೊಡಲು ನಾವು ರೆಡಿ ಮಾಡ್ಕೋಬೇಕು ಅಲ್ವಾ? ನಮ್ಮ ಬಳಿ 30 ಹಗರಣಗಳ ಪಟ್ಟಿ ಇದೆ. ಪಾದಯಾತ್ರೆ ನೋಡಿಕೊಂಡು ಒಂದೇ ಹಗರಣ ಬಿಡುತ್ತೇವೆ. ಉತ್ತರ ಕೊಡಲು ಡಿಟೈಲ್ ಪ್ಲಾನ್ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.