ಕೇರಳದ ವಯನಾಡಿನಲ್ಲಿ ಭಾರೀ ಮಳೆಯಿಂದ ಸಂಭವಿಸಿವ ಭೀಕರ ಭೂಕುಸಿತಗಳಲ್ಲಿ ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿಕೆಯಾಗಿದ್ದು, ಇನ್ನೂ ನೂರಾರು ಮಂದಿ ಕಣ್ಮರೆಯಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ಮೆಪ್ಪಾಡಿಯಲ್ಲಿ ಸುಮಾರು 4 ಗಂಟೆಗಳ ಅಂತರದಲ್ಲಿ ಸಂಭವಿಸಿದ ಮೂರು ಭೂಕುಸಿತ ಪ್ರಕರಣಗಳಲ್ಲಿ 200ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿವೆ. ಸೇತುವೆ, ರೈಲ್ವೆ ಹಳಿ ಕೂಡ ಕೊಚ್ಚಿ ಹೋಗಿದೆ. ಸುಮಾರು 5ಕ್ಕೂ ಹೆಚ್ಚು ಪಟ್ಟಣಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿವೆ.
ಎನ್ ಡಿಆರ್ ಎಫ್, ಪೊಲೀಸರು ಸೇರಿದಂತೆ ಹತ್ತಾರು ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ವಾಯುಪಡೆ, ಭಾರತೀಯ ಸೇನೆಯ 128 ತುಕಡಿಗಳು ಸ್ಥಳಕ್ಕೆ ದೌಡಾಯಿಸಿವೆ.
ಪರಿಹಾರ ಕಾರ್ಯಚರಣೆ ನಡೆದಂತೆಲ್ಲ ಪ್ರತಿ ಗಂಟೆಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದುವರೆಗೆ 128ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಚಲಿಯಾರ್ ನದಿಯಲ್ಲಿ ಹಲವಾರು ದೇಹಗಳು ಕೊಚ್ಚಿ ಹೋಗಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಮುಂಡಕೈ, ಚೂರಲ್ ಮಲ, ಅಟ್ಟಮಲ ಮತ್ತು ನೂಲುಪುರ್ಜಾ ಗ್ರಾಮಗಳು ಅತ್ಯಂತ ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗಿದ್ದು, ದುರಸ್ಥಿ ಕಾರ್ಯ ದೊಡ್ಡ ಸವಾಲಿನ ವಿಷಯವಾಗಿದೆ.