ಭಾರತದ ದೀಪ್ತಿ ಜೀವಾಂಜಿ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಮಂಗಳವಾರ ನಡೆದ ಟಿ20 ವಿಭಾಗದ 400 ಮೀ. ಓಟದ ಸ್ಪರ್ಧೆಯಲ್ಲಿ ದೀಪ್ತಿ 55.82 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದುಕೊಂಡರು. ಇದು ದಿನದ ಮೊದಲ ಪದಕ ಎಂಬುದು ವಿಶೇಷ.
ಉಕ್ರೇನ್ ನ ಯುಲಿಲಾ ಶುಲೈರ್ (55.16ಸೆಕೆಂಡ್) ಮತ್ತು ವಿಶ್ವದಾಖಲೆ ಹೊಂದಿರುವ ಟರ್ಕಿಯ ಅಸೆಲ್ ಆಂಡರ್ (55.23 ಸೆಕೆಂಡ್) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡರು. ಬುದ್ದಿಮಾಂದ್ಯ ಹೊಂದಿರುವ ಕ್ರೀಡಾಪಟುಗಳ ವಿಭಾಗವಾಗದ ಸ್ಪರ್ಧೆ ಆಗಿದೆ.
ಭಾರತ ಇದೀಗ 3 ಚಿನ್ನ, 5 ಬೆಳ್ಳಿ ಹಾಗೂ 8 ಕಂಚು ಸೇರಿದಂತೆ 16 ಪದಕದೊಂದಿಗೆ 18ನೇ ಸ್ಥಾನ ಗಳಿಸಿದೆ. ಇದಕ್ಕೂ ಮುನ್ನ ಶಾಟ್ ಪುಟ್ ನಲ್ಲಿ ಭಾಗ್ಯಶ್ರೀ ಮತ್ತು 50 ಮೀ. ಪಿಸ್ತೂಲ್ ವಿಭಾಗದಲ್ಲಿ ಅವಾನಿ ಪದಕ ಗಳಿಸುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದರು.