ಲೋಕಸಭಾ ಚುನಾವಣಾ ಪ್ರಕ್ರಿಯೆ ಅಂತ್ಯಗೊಂಡ ಬೆನ್ಲಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ತಿಹಾರ್ ಜೈಲಿಗೆ ಮರಳಿದ್ದಾರೆ.
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಅರವಿಂದ್ ಕೇಜ್ರಿವಾಲ್ ತಂದೆ-ತಾಯಿಗೆ ಕಾಲಿಗೆ ನಮಸ್ಕರಿಸಿ ತಿಹಾರ್ ಜೈಲಿಗೆ ಮರಳಿದರು.
ಮಧ್ಯಾಹ್ನ 3 ಗಂಟೆಗೆ ರಾಜ್ ಘಾಟ್ ತೆರಳಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ನಮಸ್ಕರಿಸಿದರು. ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತಿಹಾರ್ ಜೈಲಿಗೆ ಆಗಮಿಸಿದರು.
ಜೈಲಿಗೆ ಮರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ನ್ಯಾಯಾಲಯ ನೀಡಿದ್ದ 21 ದಿನಗಳಲ್ಲಿ ಒಂದು ದಿನವೂ ವ್ಯರ್ಥ ಮಾಡದೇ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದೇನೆ. ಆಮ್ ಆದ್ಮಿ ಅಲ್ಲದೇ ಮೈತ್ರಿಕೂಟದ ಇತರೆ ಪಕ್ಷಗಳ ಪರವೂ ಪ್ರಚಾರ ನಡೆಸಿದ್ದೇನೆ ಎಂದರು.
ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನು ನೀಡಿದ್ದರಿಂದ ಆಮ್ ಆದ್ಮಿ ಪಕ್ಷಕ್ಕೆ ಒಳ್ಳೆಯದಾಗಿದೆ. ನನ್ನ ದೇಶವನ್ನು ಕೋಮುವಾದಿಗಳಿಂದ ರಕ್ಷಿಸಲು ಹೋರಾಟ ನಡೆಸಿದ್ದೇನೆ. ನನಗೆ ದೇಶ ಮೊದಲು ಆಮ್ ಆದ್ಮಿ ಪಕ್ಷ ನಂತರ ಎಂದು ಅವರು ಹೇಳಿದರು.