ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲಿ ಬಂಗಲೆಯಿಂದ ಹೊರಹಾಕಿದ್ದರಿಂದ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಇದೀಗ ಅತಿಶಿ ಅವರಿಗೆ ಹೊಸ ಅಧಿಕೃತ ನಿವಾಸ ಮಂಜೂರು ನೀಡಲಾಗಿದೆ.
ದೆಹಲಿಯ ಫ್ಲಾಗ್ ಸ್ಟಾಫ್ ರಸ್ತೆಯಲ್ಲಿರುವ ಸಿವಿಲ್ ಲೈನ್ ರೆಸಿಡೆನ್ಸಿ 6 ನಿವಾಸವನ್ನು ಸಿಎಂ ಅತಿಶಿ ಅವರಿಗೆ ದೆಹಲಿ ಲೋಕೋಪಯೋಗಿ ಇಲಾಖೆ ಮಂಜೂರು ಮಾಡಿದೆ.
ಪಿಡಬ್ಲೂಡಿ ಜನರಲ್ ಪೂಲ್ ಬಂಗಲೆ ವಹಿಸಿಕೊಳ್ಳಲು ಸಿಎಂ ಅತಿಶಿ ಅವರನ್ನು ಆಹ್ವಾನಿಸಲಾಗುವುದು ಎಂದು ಪತ್ರದಲ್ಲಿ ಪಿಡಬ್ಲೂಡಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಸ್ತುತ ವಾಸವಾಗಿರುವ ನಿವಾಸವನ್ನು 15 ದಿನದಲ್ಲಿ ತೆರವುಗೊಳಿಸಬೇಕು ಹಾಗೂ ಹೊಸದಾಗಿ ಮಂಜೂರು ಮಾಡಿದ ನಿವಾಸದಲ್ಲಿ ವಾಸಿಸುವ ಬಗ್ಗೆ 8 ದಿನದಲ್ಲಿ ದೃಢಿಕರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.