ರಾಯಚೂರಿನ ಲಿಂಗಸಗೂರಿನ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ದರೋಡೆಗೆ ಒಳಗಾದ ಸ್ವಾಮೀಜಿಯ ನಾಟಕ ಮಾಡುತ್ತಿದ್ದಾರಾ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.
ಜೂನ್ 11ರಂದು 12 ರಿಂದ 12:30ಕ್ಕೆ ಇಬ್ಬರು ದುಷ್ಕರ್ಮಿಗಳು ಮಠಕ್ಕೆ ನುಗ್ಗಿ ಮಲಗಿದ್ದ ಸ್ವಾಮೀಜಿಯನ್ನು ಎಬ್ಬಿಸಿ ಅವರ ಬಳಿ ಇದ್ದ ಗನ್ ಅನ್ನೇ ಅವರ ತಲೆಗೆ ಇಟ್ಟು ಮಠದಲ್ಲಿದ್ದ 80 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ ಆಭರಣಗಳು ಹಾಗೂ 20 ಲಕ್ಷ ಹಣ ಸೇರಿದಂತೆ 35 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದರು.
ಪ್ರಕರಣ ನಡೆದ ಸಮಯದಲ್ಲಿ ಬೇರೆ ಯಾರೂ ಇರಲಿಲ್ಲ. ಯಾವುದೇ ಸಾಕ್ಷ್ಯಗಳು ಕೂಡ ಇಲ್ಲದೇ ಇರುವುದನ್ನು ಗಮನಿಸಿದ ಪೊಲೀಸರು ಸುಳ್ಳು ದೂರು ನೀಡಿ ಸ್ವಾಮೀಜಿಯೇ ನಾಟಕ ಮಾಡುತ್ತಿದ್ದಾರೆಯೇ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.