ವಿಚ್ಛೇದನ ಪಡೆದ ಮುಸ್ಲಿಮ್ ಮಹಿಳೆ ಮಾಜಿ ಪತಿಯಿಂದ ಜೀವನಾಂಶ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನೂತನ ಕ್ರಿಮಿನಲ್ ಕಾಯ್ದೆ 125 ಸೆಕ್ಷನ್ ಪ್ರಕಾರ ಮುಸ್ಲಿಮ್ ಮಹಿಳೆ ಮಾಜಿ ಪತಿಯಿಂದ ಜೀವನ ನಿರ್ವಹಣೆಗಾಗಿ ಪರಿಹಾರ ಕೇಳಬಹುದು ಎಂದು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಐತಿಹಾಸಿಕ ಶಾಹ ಬಾನೂ ಪ್ರಕರಣವನ್ನು ಉಲ್ಲೇಖಿಸಿ ಪತಿಯೊಬ್ಬ ಪತ್ನಿಗೆ ಮಧ್ಯಂತರ ಜೀವನಾಂಶ ನೀಡುವ ಆದೇಶ ವಾಪಸ್ ಪಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಭಾರತದ ಜಾತ್ಯಾತೀತ ಸಂವಿಧಾನದ ಆಧಾರದ 1986 ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದರಿಂದ ಹೊರತಾಗಿಲ್ಲ. ಇದರಲ್ಲಿ ಧರ್ಮದ ವಿಚಾರ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.