Thursday, December 25, 2025
Google search engine
Homeಮನರಂಜನೆಬಾಲಿವುಡ್ ಖ್ಯಾತ ಹಾಸ್ಯನಟ ಅಸ್ರಾಣಿ ವಿಧಿವಶ

ಬಾಲಿವುಡ್ ಖ್ಯಾತ ಹಾಸ್ಯನಟ ಅಸ್ರಾಣಿ ವಿಧಿವಶ

ಬಾಲಿವುಡ್‌ ಕಂಡ ಅದ್ಭುತ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಅಸ್ರಾಣಿ ಎಂದೇ ಖ್ಯಾತರಾದ ಗೋವರ್ಧನ್‌ ಅಸ್ರಾಣಿ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಕಾಯಿಲೆಯಿಂದ ನರಳುತ್ತಿದ್ದ ಅಸ್ರಾಣಿ ಅವರನ್ನು 5 ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.

1967ರಲ್ಲಿ ಹರೇ ಕಾಂಚನ್‌ ಕೀ ಚೂಡಿಂಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ಅಸ್ರಾಣಿ, ಗುಜರಾತಿ ಚಿತ್ರಗಳಲ್ಲಿ ಹೀರೋ ಆಗಿಯೂ ನಟಿಸಿದ್ದರು. ರಾಜೇಶ್‌ ಖನ್ನಾ ಅವರ ಆತ್ಮೀಯ ಸ್ನೇಹಿತರಾಗಿದ್ದ ಅಸ್ರಾಣಿ ಅವರ ಜೊತೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಶೋಲೆಯಲ್ಲಿ ಜೈಲರ್‌ ಆಗಿ ಅವರ ಪಾತ್ರ ಅವಿಸ್ಮರಣೀಯ. ಬಾಲಿವುಡ್‌ ನ ಅಮಿತಾಬ್‌ ಬಚ್ಚನ್‌, ಜಿತೇಂದ್ರ ಸೇರಿದಂತೆ ಹಲವು ಸ್ಟಾರ್‌ ನಟರ ಜೊತೆ ಹಾಗೂ ಖ್ಯಾತ ನಿರ್ದೇಶಕರ ಜೊತೆ ನಟಿಸಿದ್ದರು.

2000ರ ನಂತರ ಹಾಸ್ಯಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಅಸ್ರಾಣಿ, ಹೇರಾಪೇರಿ, ಆಮ್‌ ದಾನಿ ಅಟ್ಟಾನಿ ಖರ್ಚಾಯ ರೂಪಯ್ಯಾ, ಬಾಗ್ಬಾನ್‌, ಚುಪ್‌ ಚುಪ್‌ ಕೆ, ಗರಮ್‌ ಮಸಾಲಾ, ಬೋಲ್‌ ಬಚ್ಚನ್‌ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

1940, ಜನವರಿ 1ರಂದು ಜೈಪುರದಲ್ಲಿ ಸಿಂಧಿ ಕುಟುಂಬದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, ತಂದೆ ಕಾರ್ಪೆಟ್‌ ಅಂಗಡಿ ನಡೆಸುತ್ತಿದ್ದರು. ಕುಟುಂಬದ ಉದ್ಯಮದಲ್ಲಿ ಆಸಕ್ತಿ ಹೊಂದದ ಅಸ್ರಾಣಿ ಸಿನಿಮಾದತ್ತ ಆಕರ್ಷೀತರಾಗಿದ್ದರು. ರಾಜಸ್ಥಾನದ ಜೈಪುರದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ಅಸ್ರಾಣಿ ಜೈಪುರ ಆಕಾಶವಾಣಿಯಲ್ಲಿ ವಾಯ್ಸ್‌ ಆರ್ಟಿಸ್ಟ್‌ ಆಗಿ ಕೆಲಸ ಆರಂಭಿಸಿದರು.

1960ರಿಂದ 1962ರವರೆಗೆ ಸಾಹಿತ್ಯ ಕಲಾಭಾಯಿ ಠಕ್ಕರ್‌ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದ ನಂತರ 1964ರಲ್ಲಿ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ ಗೆ ಸೇರಿದರು. ಅಸ್ರಾಣಿ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments