ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್ ಬುಧವಾರ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿರುವುದು ಕೂತುಹಲ ಮೂಡಿಸಿದೆ.
ಸಂಕ್ರಾಂತಿ ಹಬ್ಬದ ನಂತರ ದರ್ಶನ್ ಗೆ ಮೈಸೂರಿನ ಆಸ್ಪತ್ರೆಯಲ್ಲಿ ಬೆನ್ನು ನೋವಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದರಿಂದ ದರ್ಶನ್ ಆಸ್ಪತ್ರೆ ಭೇಟಿ ಕುತೂಹಲ ಮೂಡಿಸಿದೆ.
ಮಣಿಪಾಲ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನು ನೋವಿಗೆ ಇಂಜೆಕ್ಷನ್ ಪಡೆದು ಮರಳಿದ್ದಾರೆ. ಇಂಜೆಕ್ಷನ್ ಪ್ರಭಾವ ಬೀರದೇ ಇದ್ದಲ್ಲಿ ಮೂರು ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಬೆನ್ನಿನ L5, S1 ಭಾಗದ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ ಬೆನ್ನಿಗೆ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್ ಫಲಿಸದಿದ್ದಲ್ಲಿ 3 ದಿನಗಳ ಬಳಿಕ ಆಪರೇಷನ್ ಮಾಡಲು ನಿರ್ಧರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಡಾ.ಅಜಯ್ ಹೆಗಡೆ ಬಳಿ ಚಿಕಿತ್ಸೆಗೆ ನಟ ಆಗಮಿಸಿದ್ದಾಗ ಅವರ ಜೊತೆ ನಟ ಧನ್ವೀರ್ ಕೂಡ ಆಗಮಿಸಿದ್ದರು.
ರೇಣುಕಾಸ್ವಾಮಿ ಪ್ರಕರಣ ಸಂಬಂಧ ದರ್ಶನ್‌ಗೆ ಮೈಸೂರಿನಲ್ಲಿ ಇರಲು ಜ.12ರಿಂದ ಜ.17ರವರೆಗೆ ನ್ಯಾಯಾಲಯ ಅನುಮತಿ ನೀಡಿದೆ. ಇದೇ ವೇಳೆ ದರ್ಶನ್ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವಿಚಾರಣೆ ಕೂಡ ನಡೆಯುತ್ತಿದೆ.