Monday, September 16, 2024
Google search engine
Homeಮನರಂಜನೆಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹಾರಿದ ನಟ ಶಾರೂಖ್ ಖಾನ್

ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹಾರಿದ ನಟ ಶಾರೂಖ್ ಖಾನ್

ಬಾಲಿವುಡ್ ನಟ ಶಾರೂಖ್ ಖಾನ್ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಶಾರೂಖ್ ಖಾನ್ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಕಣ್ಣಿನ ಸಮಸ್ಯೆ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶಾರೂಖ್ ಖಾನ್ ಕಳೆದ ಐಪಿಎಲ್ ಟಿ-20 ಟೂರ್ನಿಯ ವೇಳೆ ಬಿಸಿಗಾಳಿ ಹಾಗೂ ಹವಾಮಾನದ ವೈಪರಿತ್ಯದಿಂದ ನಿತ್ರಾಣಗೊಂಡು ಗುಜರಾತ್ ಅಹಮದಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದು, ಫೈನಲ್ ಪಂದ್ಯಕ್ಕೂ ಮುನ್ನ ಅಸ್ವಸ್ಥಗೊಂಡಿದ್ದರೂ ಪ್ರಶಸ್ತಿ ಸುತ್ತಿನ ಪಂದ್ಯದ ವೇಳೆ ಹಾಜರಿದ್ದರು.

ಅಲ್ಲದೇ ಶಾರೂಖ್ ಖಾನ್ ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಗೌಪ್ಯವಾಗಿ ಇರಿಸಿದ್ದರು. ಅದರಲ್ಲೂ ಬೆನ್ನು ನೋವಿನ ಸಮಸ್ಯೆ ಅವರನ್ನು ಹೆಚ್ಚಾಗಿ ಕಾಡಿತ್ತು ಎಂದು ಹೇಳಲಾಗಿದೆ.

ಸತತ ವೈಫಲ್ಯ ಅನುಭವಿಸಿದ್ದ ಶಾರೂಖ್ ಖಾನ್ ಕಳೆದ ವರ್ಷ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಪಠಾಣ್, ಜವಾನ್ ಹಾಗೂ ಡಂಕಿ ಚಿತ್ರಗಳು ಭಾರೀ ಯಶಸ್ಸು ಕಂಡಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments