Monday, May 11, 2026
Home ಮನರಂಜನೆ ಕಮಲ್ ಹಾಸನ್ ಹೇಳಿಕೆ ಭಾವುಕರಾಗುವ ಅಗತ್ಯವಿಲ್ಲ: ನಟ ಕಿಶೋರ್‌

ಕಮಲ್ ಹಾಸನ್ ಹೇಳಿಕೆ ಭಾವುಕರಾಗುವ ಅಗತ್ಯವಿಲ್ಲ: ನಟ ಕಿಶೋರ್‌

by Vahini
0 comments
actor kishore

ಮೈಸೂರು: ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ನೀಡಿದ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ. ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತದೆ ಎಂದು ನಟ ಕಿಶೋರ್ ಹೇಳಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಯ ವಿವಾದದ ಕುರಿತು ಪ್ರತಿಕ್ರಿಯಿಸಿ,  ಒಂದು ಭಾಷೆ ಮೇಲೂ- ಕೀಳು ಎಂಬುದಿಲ್ಲ. ಕನ್ನಡವು ಎಲ್ಲಿಂದಲೋ ಹುಟ್ಟಿ ಬಂದಿದೆ ಹಾಗೆ ತಮಿಳು ಸಹ ಎಲ್ಲಿಂದಲೂ ಹುಟ್ಟಿ ಬಂದಿದೆ. ಭಾವುಕವಾಗಿ ಜನರನ್ನ ರೊಚ್ಚಿಗೆಬ್ಬಿಸಬಾರದು ಎಂದರು.

ನನ್ನ ತಾಯಿಯ ಹೊಟ್ಟೆಯಿಂದ ನಾನು ಹುಟ್ಟಿ ಬಂದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅವಮಾನವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು? ತುಂಬಾ ತಿಳಿದಂತಹ ಮನುಷ್ಯ ಏನೂ ಹೇಳಿದ್ದಾರೆ ಎಂದರೆ ಅದಕ್ಕೆ ತರ್ಕ ಇರಲಿದೆ. ಏನೋ ಅರ್ಥ ಇರಬೇಕು ಅದನ್ನು ಪ್ರಶ್ನೆ ಕೇಳಿ ಏನು ಎಂಬುದನ್ನು ತಿಳಿದುಕೊಳ್ಳಬೇಕು.

ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಭಾಷೆಯನ್ನು ಭಾವುಕತೆಯಿಂದ ನೋಡದೆ ಭಾಷೆಯನ್ನ ಭಾಷೆಯಾಗಿ ನೋಡಿ. ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ. ಒಂದು ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದರೆ ಅವಮಾನ ಎಂದು ಯಾಕೆ ಭಾವಿಸಬೇಕು? ಎಂದರು.

ಕಮಲ್ ಹಾಸನ್ ಹೇಳಿರೋದು ಸಹ ಒಂದು  ರೀತಿಯ ಸಿದ್ದಂತಾ ಇರಬಹುದು. ಅವರ ಥಿಯರಿ ಏನು ತಿಳಿದುಕೊಳ್ಳೋಣ. ನನ್ನ ಅಭಿಪ್ರಾಯದಲ್ಲಿ ಇದು ಅವಮಾನವಲ್ಲ ಎಂದು ಹೇಳಿದರು.

ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಕ್ಕಿಂತ ದೇಶದೊಳಗೆ ನಡೆದದ್ದು ಹೆಚ್ಚು. ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ವೀಕ್ ಆಗ್ತಿದೆ. ಜಾತಿ, ಧರ್ಮ, ಭಾಷೆ ಬಗ್ಗೆ ಅಂಧಾಭಿಮಾನ ಎಲ್ಲತನಕ ಇರಲಿದಿಯೋ ಅಲ್ಲಿಯ ತನಕ  ಬಳಸಿಕೊಳ್ಳೋರು ಇರುತ್ತಾರೆ. ನಿಜವಾದ ಸಮಸ್ಯೆ ಬಗೆಹರಿಸಿಕೊಳ್ಳುವ ಕಡೆ ನೋಡಬೇಕು. ಫೆಹಲ್ಘಮ್ ನಲ್ಲಿ ಘಟನೆ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು. ವಿನಹ ಅದನ್ನು ರಾಜಕೀಯ ಲಾಭಕ್ಕಾಗಿ ನಾವು ಬಿಟ್ಟು ಕೊಡಬಾರದು ಎಂದರು.

ಈ ಹಿಂದಿನ ಘಟನೆಗಳ ಸತ್ಯ ಸತ್ಯತೆಗಳು ಹೊರ ಬಂದಿಲ್ಲ. ಅಲ್ಲಿನ ಗವರ್ನರ್ ಸತ್ಯಪಾಲ್ ಮಲ್ಲಿಕ್ ಅವರ ಆರೋಪಗಳು ಚರ್ಚೆಯಾಗಬೇಕು. ಅವರ ಆರೋಪ ತನಿಖೆಯಾಗಿಲ್ಲ. ಧ್ವನಿ ಎತ್ತಿದರು ಅದನ್ನು ಅಡಗಿಸುತ್ತಾರೆ. ಮಾಧ್ಯಮಗಳ ಹುಟ್ಟಡಗಿಸುವ ಕೆಲಸವಾಗಿದೆ. ಪ್ರಶ್ನೆ ಕೇಳೋದು ಡೆಮೋಕ್ರೇಸಿಯ ಲಕ್ಷಣ. ಉತ್ತರವನ್ನು ಬಡಿದು ಕೇಳಬೇಕು ಎಂದು ಹೇಳಿದರು.

ನಾವು ಜಾತಿ ಧರ್ಮದಲ್ಲಿ ಅಂಧರಾಗಿ ಕುಳಿತಿದ್ದೇವೆ. ದೇಶದ ವಿಚಾರದಲ್ಲೂ ಅಂಧರಾಗಬಾರದು. ಜನ ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡುವವರೆಗೂ ಬಿಡಬಾರದು. ಪ್ರಧಾನಿಗಳು ಆರ್ಮಿ ಜೆರ್ಸಿ ಹಾಕೊಂಡು ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಲಾಭ ಪಡೆಯಲಾಗಿದೆ ಎಂದು ಆರೋಪಿಸಿದರು.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign