ಕನ್ನಡದ ಖ್ಯಾತ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಮಿತಿ ಮೀರಿದ್ದು, ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಅಭಿಮಾನಿಗಳ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸ್ ಕಚೇರಿಗೆ ಬುಧವಾರ ಆಗಮಿಸಿದ ವಿಜಯಲಕ್ಷ್ಮೀ, ತಮಗೆ ವೈಯಕ್ತಿಕವಾಗಿ ಅಶ್ಲೀಲ ಸಂದೇಶ ಕಳುಹಿಸಿದ 150ಕ್ಕೂ ಅಧಿಕ ಪೋಸ್ಟ್ ಗಳ ವಿರುದ್ಧ ದೂರು ದಾಖಲಿಸಿದ್ದಾರೆ.
15 ಮಂದಿ ಇನ್ ಸ್ಟಾಗ್ರಾಂ ಐಡಿಯಿಂದ 150ಕ್ಕೂ ಅಧಿಕ ವೈಯಕ್ತಿಕವಾಗಿ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ವಿಜಯಲಕ್ಷ್ಮೀ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ದೂರು ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡದೇ ವಿಜಯಲಕ್ಷ್ಮೀ ವಾಪಸ್ ತೆರಳಿದ್ದಾರೆ.
ಸುದೀಪ್ ಅಭಿನಯದ ಮಾರ್ಕ್ ಚಿತ್ರ ಬಿಡುಗಡೆಗೆ ಹಿನ್ನೆಲೆಯಲ್ಲಿ ಸುದೀಪ್ ನೀಡಿದ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತೆ ಆಗಿದ್ದು, ಇದಕ್ಕೆ ವಿಜಯಲಕ್ಷ್ಮೀ ಪರೋಕ್ಷವಾಗಿ ಪ್ರತಿಕ್ರಿಯಿಸುವ ಮೂಲಕ ತಿರುಗೇಟು ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ಹಾಗೂ ದರ್ಶನ್ ಸೋದರ ದಿನಕರ್ ತೂಗೂದೀಪ ಮಂಗಳವಾರ ಜೈಲಲ್ಲಿರುವ ದರ್ಶನ್ ಭೇಟಿ ಮಾಡಿ ಮಾತುಕತೆ ನಡೆಸಿ ಮರಳಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.


