ಬಾಲಿವುಡ್ ನಟಿ ದಿಶಾ ಪಟಾನಿ ಅವರ ಉತ್ತರ ಪ್ರದೇಶದ ಬರೇಲಿ ನಿವಾಸದ ಬಳಿ ಗುಂಡು ಹಾರಿಸಿದ ಇಬ್ಬರು ಶೂಟರ್ ಗಳು ಪೊಲೀಸರ ಎನ್ ಕೌಂಟರ್ ಬಲಿಯಾಗಿದ್ದಾರೆ.
ಗಾಜಿಯಾಬಾದ್ ನ ಟ್ರೊನಿಕಾ ನಗರದಲ್ಲಿ ಬುಧವಾರ ಶೂಟರ್ ಗಳಾದ ರವೀಂದ್ರ ಅಲಿಯಾಸ್ ಕುಲ್ಲು ಮತ್ತು ಅರುಣ್ ಅವರನ್ನು ಪೊಲೀಸರು ಎನ್ ಕೌಂಟರ್ ಮಾಡಲಾಗಿದೆ. ಇವರು ರೋಹಿತ್ ಗೋದ್ರಾ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದು, ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಿಶಾ ಪಟಾನಿ ನಿವಾಸದ ಬಳಿ ಸೆಪ್ಟೆಂಬರ್ 12ರಂದು ಗುಂಡು ಹಾರಿಸಿದ ಶೂಟರ್ ಗಳು ಬಳಸಿದ್ದ ದ್ವಿಚಕ್ರ ವಾಹನವನ್ನು ಇವರ ಮೇಲೆ ನಿಗಾ ವಹಿಸಿದ್ದ ಪೊಲೀಸರು ಪತ್ತೆ ಹಚ್ಚಿದ್ದರು.
ದೆಹಲಿ ಹಾಗೂ ಉತ್ತರ ಪ್ರದೇಶ ವಿಶೇಷ ಕಾರ್ಯಾಪಡೆ ಜಂಟಿ ಕಾರ್ಯಾಚರಣೆ ನಡೆಸಿದರು. ಇಬ್ಬರು ಶೂಟರ್ ಗಳು ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ದಿಶಾ ಪಟಾನಿ ಕುಟುಂಬದ ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದೆ ಎಂದು ಆರೋಪಿಸಿ ರೋಹಿತ್ ಗೋದ್ರಾ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ದಿಶಾ ಪಟಾನಿ ನಿವಾಸದ ಬಳಿ ಗುಂಡು ಹಾರಾಟವನ್ನು ಸಮರ್ಥಿಸಿಕೊಂಡಿತ್ತು.


