ನಾಯಕ ಪವನ್ ಶೆರಾವತ್ ಅವರ ಮಿಂಚಿನ ಪ್ರದರ್ಶನದ ನೆರವಿನಿಂದ ತೆಲುಗು ಟೈಟಾನ್ಸ್ ತಂಡ 37-29 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್ ನಲ್ಲಿ ಶುಭಾರಂಭ ಮಾಡಿದೆ.
ಹೈದರಾಬಾದ್ ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಪವನ್ ಶೆರಾವತ್ ಮೊದಲ ರೈಡ್ ನಲ್ಲಿ ಅಂಕ ತಂದುಕೊಟ್ಟಿದ್ದೂ ಅಲ್ಲದೇ ನಂತರ ಸತತವಾಗಿ ಮೇಲುಗೈ ಸಾಧಿಸಿ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಮೊದಲ ಅವಧಿಯ ಆಟ ಅಂತ್ಯಗೊಂಡಾಗ ತೆಲುಗು ಟೈಟಾನ್ಸ್ 20-11ರಿಂದ ಮುನ್ನಡೆ ಸಾಧಿಸಿದ್ದು, 9 ಅಂಕಗಳ ಮುನ್ನಡೆ ಕೊನೆಯವರೆಗೂ ಉಳಿಸಿಕೊಳ್ಳುವ ಮೂಲಕ ಗೆಲುವು ಸಾಧಿಸಿತು.