ಭಾರೀ ಕುತೂಹಲ ಮೂಡಿಸಿರುವ ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದ್ದು, ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳ ವರದಿ ಹೇಳಿವೆ.
370ನೇ ವಿಧಿ ರದ್ದುಪಡಿಸಿದ ನಂತರ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಹಾಗೂ ಹರಿಯಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಇದೀಗ ವಿವಿಧ ಸಂಸ್ಥೆಗಳು ನಡೆಸಿದ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಲಿದ್ದು, ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ.
ಜಮ್ಮು ಕಾಶ್ಮೀರದ 90 ಹಾಗೂ ಹರಿಯಾಣದ 90 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎರಡೂ ರಾಜ್ಯಗಳಲ್ಲಿ ಬಹುಮತ ಪಡೆಯಲು 46 ಸ್ಥಾನಗಳಲ್ಲಿ ಗೆಲ್ಲಬೇಕಾಗಿದೆ.
ಹರಿಯಾಣ
ದೈನಿಕ್ ಭಾಸ್ಕರ್: ಬಿಜೆಪಿ 19-20, ಕಾಂಗ್ರೆಸ್ 44-54, ಜೆಜೆಪಿ 0-1, ಐಎನ್ ಎಲ್ ಡಿ 1-5, ಆಪ್ 0-1, ಇತರೆ 4-9
ಧ್ರುವ್ ರಿಸರ್ಚ್: ಬಿಜೆಪಿ 22-32, ಕಾಂಗ್ರೆಸ್ 50-64, ಜೆಜೆಪಿ 0, ಐಎನ್ ಎಲ್ ಡಿ 0-2, ಆಪ್ 0, ಇತರೆ 2-8
ಜಿಸ್ಟ್, ಟಿಐಎಫ್ ರಿಸರ್ಚ್: ಬಿಜೆಪಿ 29-37, ಕಾಂಗ್ರೆಸ್ 54-53, ಜೆಜೆಪಿ 0, ಐಎನ್ ಎಲ್ ಡಿ 0-2, ಆಪ್ 0, ಇತರೆ 4-6
ಪಿಪಲ್ಸ್ ಪ್ಲಸ್: ಬಿಜೆಪಿ 20-32, ಕಾಂಗ್ರೆಸ್ 49-61, ಜೆಜೆಪಿ 0-1, ಐಎನ್ ಎಲ್ ಡಿ 2-3, ಆಪ್ 0, ಇತರೆ 3-5
ಜಮ್ಮು ಕಾಶ್ಮೀರ
ದೈನಿಕ್ ಭಾಸ್ಕರ್: ಬಿಜೆಪಿ 20-25, ಕಾಂಗ್ರೆಸ್ 35-45, ಪಿಡಿಪಿ 4-5, ಇತರೆ 12-18
ಸಿವೋಟರ್ಸ್ ಬಿಜೆಪಿ 27-32, ಕಾಂಗ್ರೆಸ್ 40-48, ಪಿಡಿಪಿ 6-12, ಇತರೆ 5-11
ಪೀಪಲ್ಸ್ ಪ್ಲಸ್: ಬಿಜೆಪಿ 23-27, ಕಾಂಗ್ರೆಸ್ 46-50, ಪಿಡಿಪಿ 7-11, ಇತರೆ 4-6