Friday, November 22, 2024
Google search engine
Homeತಾಜಾ ಸುದ್ದಿಖ್ಯಾತ ನಟ ಮೋಹನ್ ಲಾಲ್ ಆಸ್ಪತ್ರೆಗೆ ದಾಖಲು!

ಖ್ಯಾತ ನಟ ಮೋಹನ್ ಲಾಲ್ ಆಸ್ಪತ್ರೆಗೆ ದಾಖಲು!

ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖ್ಯಾತ ಹಿರಿಯ ನಟ ಮೋಹನ್ ಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಮೋಹನ್ ಲಾಲ್ ಅವರನ್ನು ದಾಖಲಿಸಲಾಗಿದ್ದು, ತೀವ್ರ ಜ್ವರ, ಉಸಿರಾಟದ ಸಮಸ್ಯೆ, ಮಾಂಸಖಂಡಗಳ ನೋವು ಕಾಣಿಸಿಕೊಂಡಿದೆ. ಇದು ವೈರಲ್ ಜ್ವರದ ಕಾರಣ ಲಕ್ಷಣಗಳಾಗಿದ್ದು, ವೈದ್ಯಕೀಯ ತಪಾಸಣೆ ನಂತರ ಚಿಕಿತ್ಸೆ ನಡೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

64 ವರ್ಷದ ಮೋಹನ್ ಲಾಲ್ ಅವರನ್ನು ಸಾರ್ವಜನಿಕ ಸಂಪರ್ಕದಿಂದ ಕೆಲವು ದಿನ ದೂರ ಉಳಿಯುವಂತೆ ವೈದ್ಯರು ಸೂಚಿಸಿದ್ದಾರೆ.

ಲೂಸಿಯಾ-2 ಚಿತ್ರದ ಚಿತ್ರೀಕರಣ ಪೂರೈಸಿ ಪೋಸ್ಟ್ ಪ್ರೊಡಾಕ್ಷನ್ ಕೆಲಸ ಆರಂಭವಾಗಿದೆ. ಇದರ ನಡುವೆ ಮೋಹನ್ ಲಾಲ್ ಬಾರೂಜ್ ಚಿತ್ರದ ಚಿತ್ರೀಕರಣ ಮುಗಿಸಿ ಗುಜರಾತ್ ನಿಂದ ಕೊಚ್ಚಿಗೆ ಮರಳಿದ ವೇಳೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಮೋಹನ್ ಲಾಲ್ ಮೊದಲ ಜಾರಿ ನಿರ್ದೇಶಿಸುತ್ತಿರುವ `ಬಾರೂಜ್’ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ. ಮೋಹನ್ ಲಾಲ್ ಅಸ್ವಸ್ಥಗೊಂಡಿದ್ದರಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದೂಡುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments