ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣವತ್ ಗೆ ಕೊನೆಗೂ ಸೆನ್ಸಾರ್ ಮಂಡಳಿ ಯುಎ ಪ್ರಮಾಣಪತ್ರ ನೀಡಿದೆ ಎಂದು ಹೇಳಲಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಮರ್ಜೆನ್ಸಿ ಮತ್ತು ಅವರ ಹತ್ಯೆ ಘಟನೆ ಕುರಿತ ಕಥೆ ಹೊಂದಿರುವ ಎಮರ್ಜೆನ್ಸಿ ಚಿತ್ರ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಇದು ಸಿಖ್ಖರ ನರಮೇಧ ಕುರಿತ ವಿಷಯ ಪ್ರಸ್ತಾಪಿಸಿದ್ದು, ಒಂದು ಕೋಮಿನ ಜನರ ಭಾವನೆ ಕೆರಳಿಸಲಿದ್ದು, ಕೋಮುಗಲಭೆಗೆ ಕಾರಣವಾಗಬಹುದು ಎಂದು ಆರೋಪಿಸಲಾಗಿತ್ತು.
ಕೇಂದ್ರ ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಲಾಗಿದ್ದು, ಘಟನೆಗೆ ಬಗ್ಗೆ ದಾಖಲೆಗಳನ್ನು ಚಿತ್ರದಲ್ಲಿ ತೋರಿಸುವಂತೆ ಸೂಚಿಸಿದೆ.
ಯುಎ ಪ್ರಮಾಣ ಪತ್ರ ಅಂದರೆ ಎಲ್ಲಾ ವಯೋಮಿತಿಯ ಜನರು ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಜುಲೈ 8ರಂದು ಚಿತ್ರವನ್ನು ಸೆನ್ಸಾರ್ ಮಂಡಳಿ ಮುಂದೆ ಇಡಲಾಗಿದ್ದು, ಸುಮಾರು ಎರಡು ತಿಂಗಳ ನಂತರ ಪ್ರಮಾಣ ಪತ್ರ ನೀಡಲಾಗಿದೆ.
ಸೆಪ್ಟೆಂಬರ್ 9ರಂದು ಬಿಡುಗಡೆ ಆಗಬೇಕಿದ್ದ ಎಮರ್ಜೆನ್ಸಿ ಚಿತ್ರ ಮುಂದೂಡಲಾಗಿದ್ದು, ಪ್ರಮಾಣ ಪತ್ರ ಲಭಿಸಿರುವ ಹಿನ್ನೆಲೆಯಲ್ಲಿ ಹೊಸ ದಿನಾಂಕ ಘೋಷಣೆ ಆಗಬೇಕಿದೆ.