ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಲೋಕಸಭಾ ಚುನಾವಣೆಯಲ್ಲಿ 4346 ಮತಗಳಿಂದ ಸೋಲುಂಡಿದ್ದಾರೆ. ಈ ಮೂಲಕ ಕಳೆದ 10 ವರ್ಷಗಳಲ್ಲಿ ಸತತ 6ನೇ ಬಾರಿ ಸೋಲುಂಡಿದ್ದಾರೆ.
ಭರ್ಫಂಗ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭುಟಿಯಾ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಅಭ್ಯರ್ಥಿ ಸಿಕ್ಕಿಂನ ರಿಕ್ಷಲ್ ಡೋರ್ಜೆವಿರುದ್ಧ ಸೋಲುಂಡರು.
ಭುಟಿಯಾ ಸ್ಪರ್ಧಿಸಿದ್ದ ಸಿಕ್ಕಿಂ ಡೊಮೆಕ್ರೆಟಿಕ್ ಫ್ರಂಟ್ ಪಾರ್ಟಿ 32 ಕ್ಷೇತ್ರಗಳ ಪೈಕಿ ಕೇವಲ 1 ಸ್ಥಾನದಲ್ಲಿ ಗೆಲುವು ಕಂಡಿದ್ದು, 31 ಸ್ಥಾನಗಳಲ್ಲಿ ಹೀನಾಯ ಸೋಲುಂಡಿದೆ.
2014ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿ ಡಾರ್ಜಲಿಂಗ್ ಮತ್ತು ಸಿಲಿಗುರಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಬೈಚುಂಗ್ ಭುಟಿಯಾ, ಪಶ್ಚಿಮ ಬಂಗಾಳದಿಂದ ಎರಡು ಬಾರಿ ಸ್ಪರ್ಧಿಸಿ ಸೋಲುಂಡಿದ್ದರು.
ನಂತರ ಸಿಕ್ಕಿಂ ಫ್ರಂಟ್ ಪಕ್ಷಕ್ಕೆ ಸೇರ್ಪಡೆಗೊಂಡ ಭುಟಿಯಾ ಗ್ಯಾಂಕ್ವಾಕ್, ಟುಮೆನ್ ಲಿಂಗಿ ಕ್ಷೇತ್ರದಿಂದ ಸೋಲುಂಡಿದ್ದರು. ಅಲ್ಲದೇ 2019ರ ಗ್ಯಾಂಕ್ವಾಕ್ ನ ಉಪ ಚುನಾವಣೆಯಲ್ಲೂ ಸ್ಪರ್ಧಿಸಿ ಸೋಲುಂಡಿದ್ದರು.