Friday, November 22, 2024
Google search engine
Homeತಾಜಾ ಸುದ್ದಿ1991ರ ನಂತರ ಮೊದಲ ಬಾರಿ ಆರ್ ಬಿಐ ಖಜಾನೆ ಸೇರಲಿದೆ ಬ್ರಿಟನ್ ನ 1,00,000 ಕೆಜಿ...

1991ರ ನಂತರ ಮೊದಲ ಬಾರಿ ಆರ್ ಬಿಐ ಖಜಾನೆ ಸೇರಲಿದೆ ಬ್ರಿಟನ್ ನ 1,00,000 ಕೆಜಿ ಚಿನ್ನ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೇ ಮೊದಲ ಬಾರಿಗೆ ಬ್ರಿಟನ್ ನಿಂದ 100 ಟನ್ ಅಂದರೆ ಸುಮಾರು 1 ಲಕ್ಷ ಕೆಜಿ ಚಿನ್ನವನ್ನು ತನ್ನ ಖಜಾನೆಗೆ ಸೇರಲಿದೆ. 1991ರ ನಂತರ ಇದೇ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದ ಚಿನ್ನ ಭಾರತಕ್ಕೆ ಬರಲಿದೆ.

ಆರ್ ಬಿಐನ ಅರ್ಧದಷ್ಟು ಚಿನ್ನ ವಿದೇಶಗಳ ಭದ್ರತಾ ಠೇವಣಿಯಲ್ಲಿ ಇರಿಸಲಾಗಿದೆ. ಇದರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಇಂಟರ್ ನ್ಯಾಷನಲ್ ಒಪ್ಪಂದಗಳು ಮತ್ತು ದೇಶೀಯ ಬ್ಯಾಂಕ್ ಗಳಲ್ಲಿ ಇರಿಸಲಾಗಿದೆ.

ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ಆರ್ ಬಿಐ ವಾಪಸ್ ಪಡೆಯುವ ಮೂಲಕ ಶುಲ್ಕದ ವೆಚ್ಚ ಉಳಿಸುವತ್ತ ಗಮನಹರಿಸಿದೆ ಎಂದು ಹೇಳಲಾಗಿದೆ.

2024 ಮಾರ್ಚ್ 31ರವರೆಗೂ ಸೆಂಟ್ರಲ್ ಬ್ಯಾಂಕ್ ನಲ್ಲಿ ಆರ್ ಬಿಐ 822.10 ಟನ್ ಚಿನ್ನವನ್ನು ಭದ್ರತೆಗಾಗಿ ಇರಿಸಿದೆ. ಕಳೆದ ವರ್ಷ 794.63 ಟನ್ ಚಿನ್ನ ಇರಿಸಲಾಗಿದ್ದು, ಉಳಿದ ಚಿನ್ನ ಇತ್ತೀಚೆಗೆ ಇರಿಸಲಾಗಿದೆ.

ಭಾರತ 1991ರ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂದರೆ 100 ಟನ್ ಚಿನ್ನವನ್ನು ಭಾರತಕ್ಕೆ ವಾಪಸ್ ತರುತ್ತಿರುವುದು ಹೆಚ್ಚಿನವರಿಗೆ ಮಾಹಿತಿಯೇ ಇಲ್ಲ ಎಂದು ಹಿರಿಯ ಆರ್ಥಿಕ ತಜ್ಞ ಸಂಜೀವ್ ಸಾಯಲ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments