ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗಾಯ್ ವಿಟ್ಟಲ್ ಚಿರತೆ ದಾಳಿಯಿಂದ ಪಾರಾದ ಘಟನೆ ಜಿಂಬಾಬ್ವೆಯ ಕೋಣಗಳ ಮೀಸಲು ಅರಣ್ಯದಲ್ಲಿ ಸಂಭವಿಸಿದೆ.
ಚಿರತೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯ್ ವಿಟ್ಟಲ್ ಅವರನ್ನು ಏರ್ ಲಿಫ್ಟ್ ಮೂಲಕ ಹರಾರೆಗೆ ಕರೆದೊಯ್ಯುಲಾಗಿದ್ದು, ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಚಿರತೆ ದಾಳಿಯಲ್ಲಿ ಹಣೆ ಹಾಗೂ ಕೈಗಳಿಗೆ ಪೆಟ್ಟಾಗಿದ್ದರಿಂದ ತೀವ್ರ ರಸ್ತಸ್ರಾವದಿಂದ ಬಳಲುತ್ತಿದ್ದ ವಿಟ್ಟಲ್ ಅವರನ್ನು ವೈದ್ಯಕೀಯ ಸಿಬ್ಬಂದಿ ಸಮಯಪ್ರಜ್ಞೆ ತೋರಿ ಚಿಕಿತ್ಸೆ ನೀಡಿ ಕಾಪಾಡಿದ್ದಕ್ಕೆ ವಿಟ್ಟಲ್ ಪತ್ನಿ ಹನ್ನಾಹ್ ಸ್ಟೋಕ್ಸ್ ಧನ್ಯವಾದ ತಿಳಿಸಿದ್ದಾರೆ.