ಪೊಲೀಸ್ ಅಧಿಕಾರಿ ಎಂದು ನಂಬಿಸಿ 5 ಮಹಿಳೆಯರನ್ನು ಮದುವೆ ಆಗಿ ವಂಚಿಸಿದ್ದ 34 ವರ್ಷದ ವ್ಯಕ್ತಿಯನ್ನು ಒಡಿಶಾದ ಭುವನೇಶ್ವರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಯಾರಿಗೂ ವಿಚ್ಛೇದನ ನೀಡದೇ 5 ಮಹಿಳೆಯರನ್ನು ವಂಚಿಸಿ ಲಕ್ಷಾಂತರ ರೂಪಾಯಿ ವಸೂಲು ಮಾಡುತ್ತಿದ್ದ ವ್ಯಕ್ತಿ ಮ್ಯಾಟರ್ ಮೋನಿಯಾದಲ್ಲಿ 49 ಮಹಿಳೆಯರ ಜೊತೆ ಸಂಪರ್ಕ ಹೊಂದಿದ್ದು, ಅವರ ಜೊತೆಯೂ ಮದುವೆ ಆಗಿ ವಂಚಿಸಲು ಬಲೆ ಹೆಣೆದಿದ್ದ ಎಂದು ತಿಳಿದು ಬಂದಿದೆ.
ಸತ್ಯಜೀತ್ ಸಮಲ್ ನನ್ನು ಮದುವೆ ಆಗಿ ವಂಚನೆಗೊಳಗಾಗಿದ್ದ ಇಬ್ಬರು ಮಹಿಳೆಯರು ನೀಡಿದ ಪ್ರತ್ಯೇಕ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಂತ್ರ ರೂಪಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಯನ್ನು ಸತ್ಯಜೀತ್ ಬಲೆಗೆ ಕೆಡವಲು ಬಳಸಿಕೊಳ್ಳಲಾಗಿದ್ದು, ಬಂಧಿತನಿಂದ 2.10 ಲಕ್ಷ ರೂ., ಮೊಬೈಲ್ ಕಾರು, ಬೈಕ್, ಪಿಸ್ತೂಲ್, ಮದುವೆ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಇಬ್ಬರನ್ನು ಮದುವೆ ಆಗಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಮದುವೆ 5 ಮದುವೆ ಆಗಿಲ್ಲ ಎಂದು ವಾದಿಸಿದ್ದ. ಆದರೆ 5 ಮದುವೆ ಆಗಿದ್ದ ಈತನ ಒಬ್ಬ ಪತ್ನಿ ಒಡಿಶಾದಲ್ಲಿ, ಇಬ್ಬರು ಕೋಲ್ಕತಾದಲ್ಲಿ ಮತ್ತು ಒಬ್ಬಾಕೆ ದೆಹಲಿಯಲ್ಲಿದ್ದು, 5ನೇ ಪತ್ನಿಯ ವಿವರಗಳಿಗೆ ಶೋಧ ನಡೆಸಿದ್ದಾರೆ.
ಸತ್ಯಜೀತ್ ಸಮಲ್ ಹೆಸರಿನಲ್ಲಿದ್ದ ಮೂರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈತ ಜೈಪುರ ಮೂಲದವನಾಗಿದ್ದು, ಭುವನೇಶ್ವರದಲ್ಲಿ ತಂಗಿದ್ದ. ಈತ ವಿಧವೆ ಹಾಗೂ ವಿಚ್ಛೇದನಗೊಂಡ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬಲೆ ಬೀಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮದುವೆ ಆಗುವುದಾಗಿ ಭರವಸೆ ಮೂಡಿಸಿ ನಯವಾಗಿ ಹಣ, ಕಾರು ವಸೂಲು ಮಾಡುತ್ತಿದ್ದ. ಕೊಡದೇ ಇದ್ದಾಗ ಪಿಸ್ತೂಲು ತೋರಿಸಿ ಬೆದರಿಕೆ ಹಣ ವಸೂಲು ಮಾಡುತ್ತಿದ್ದ. ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಸುಮಾರು 49 ಮಹಿಳೆಯರ ಜೊತೆ ಸಂಪರ್ಕ ಹೊಂದಿದ್ದು, ಅವರ ಜೊತೆ ಮದುವೆಯ ಬಲೆ ಬೀಸಿದ್ದು ಬೆಳಕಿಗೆ ಬಂದಿದೆ.
ದೂರು ನೀಡಿದ ಮಹಿಳೆಯರಲ್ಲಿ ಒಬ್ಬಾಕೆ ತನಗೆ ಸತ್ಯಜೀತ್ ಸಮಲ್ ಮ್ಯಾಟರ್ ಮೊನಿಯಾದಲ್ಲಿ ಪರಿಚಯ ಆಗಿದ್ದು, ಪರಿಚಯ ಗಾಢವಾದ ನಂತರ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ನಂತರ ಮದುವೆ ಆಗುವುದಾಗಿ ಭರವಸೆ ನೀಡಿದ. ಮದುವೆ ಆಗಬೇಕಾದರೆ ಕಾರು ಖರೀದಿಸಿದ ಸಾಲ ತೀರಿಸಲು ಹಣ ಕೇಳಿದ್ದ. ಕಾರಿನ ಸಾಲ ತೀರಿಸಲು 8.15 ಲಕ್ಷ ರೂ. ಹಾಗೂ ಹೊಸದಾಗಿ ಉದ್ಯಮ ಆರಂಭಿಸಲು 36 ಲಕ್ಷ ರೂ. ನೀಡಿದ್ದು, ಹಣ ಕೊಡದೇ ಇದ್ದಾಗ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ನೀಡಿದ ಮತ್ತೊಬ್ಬ ಮಹಿಳೆ ಮದುವೆ ಆಗುವುದಾಗಿ ಮೊಟಾರ್ ಬೈಕ್ ಖರೀದಿಗೆ 8.60 ಲಕ್ಷ ರೂ. ಹಾಗೂ ಹಲವು ಬ್ಯಾಂಕ್ ಗಳಲ್ಲಿ ಮಾಡಿದ್ದ ಸಾಲ ತೀರಿಸಿದ್ದಾಗಿ ಹೇಳಿದ್ದಾರೆ.