ಭಾರತ ತಂಡದ ಕೋಚ್ ಸ್ಥಾನಕ್ಕೆ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಡಬ್ಲ್ಯೂ.ವಿ. ರಾಮನ್ ನಡುವೆ ಪೈಪೋಟಿ ಏರ್ಪಡಿದ್ದು, ಇಬ್ಬರಲ್ಲಿ ಯಾರಾಗ್ತಾರೆ ಮುಖ್ಯ ಕೋಚ್ ಎಂಬ ಕುತೂಹಲ ಮೂಡಿಸಿದೆ.
ಭಾರತ ತಂಡ ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಅವಧಿ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಕೋಚ್ ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಮಾಡಿದ್ದು, ಅಧಿಕೃತವಾಗಿ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗೌತಮ್ ಗಂಭೀರ್ ಮತ್ತು ಡಬ್ಲ್ಯೂ ವಿ ರಾಮನ್ ಇಬ್ಬರನ್ನು ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇಬ್ಬರಲ್ಲಿ ಒಬ್ಬರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು ಎಂದು ಜೈ ಶಾ ತಿಳಿಸಿದ್ದಾರೆ.
ಗಂಭೀರ್ ಮತ್ತು ರಾಮನ್ ಅವರನ್ನು ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ಮಾಡಿದೆ. ಸಲಹಾ ಸಮಿತಿ ಶೀಘ್ರದಲ್ಲೇ ಅಧಿಕೃತವಾಗಿ ಭಾರತ ತಂಡದ ಕೋಚ್ ಹೆಸರು ಪ್ರಕಟಿಸಲಿದೆ.
ಜುಲೈ 27ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ನೂತನ ಕೋಚ್ ಸೇರಿಕೊಳ್ಳಲಿದ್ದಾರೆ. ಶ‍್ರೀಲಂಕಾ ಪ್ರವಾಸದ ವೇಳೆ ಭಾರತ ತಂಡ ಮೂರು ಟಿ-20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ.
ಜುಲೈ 6ರಿಂದ ನಡೆಯಲಿರುವ ನಡೆಯಲಿರುವ ಜಿಂಬಾಬ್ವೆ ಪ್ರವಾಸದ ವೇಳೆ ತಾತ್ಕಾಲಿಕವಾಗಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ. ವಿವಿಎಸ್ ಲಕ್ಷ್ಮಣ್ ಪ್ರಸ್ತುತ ಭಾರತ ತಂಡದ ಅರೆಕಾಲಿಕ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದು, ದ್ರಾವಿಡ್ ಅನುಪಸ್ಥಿತಿ ವೇಳೆ ಕೋಚ್ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.