ಪಾಕಿಸ್ತಾನ ಸೀಮಿತ ಓವರ್ ಗಳ ತಂಡದ ಕೋಚ್ ಆಗಿ ನೇಮಕಗೊಂಡ ನಾಲ್ಕು ತಿಂಗಳಿಗೆ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ದಂತಕತೆ ಗ್ಯಾರಿ ಕಸ್ಟರ್ನ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ಆಗಿದ್ದ ಗ್ಯಾರಿ ಕಸ್ಟರ್ನ್ ಟಿ-20 ವಿಶ್ವಕಪ್ ಗೂ ಮುನ್ನ ಪಾಕಿಸ್ತಾನ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು.
ಪಾಕಿಸ್ತಾನ ತಂಡದ ಏಕದಿನ ಮತ್ತು ಟಿ-20 ತಂಡಗಳ ಕೋಚ್ ಆಗಿ ನೇಮಕಗೊಂಡಿದ್ದ ಗ್ಯಾರಿ ಕಸ್ಟರ್ನ್ 4 ತಿಂಗಳಲ್ಲೇ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ತಾನ ತಂಡದ ಸೋಲಿಗೆ ಪ್ರತಿಷ್ಠೆ ಹಾಗೂ ಶಸ್ತಿನ ಕೊರತೆ ಕಾರಣ ಎಂದು ಗ್ಯಾರಿ ಕಸ್ಟರ್ನ್ ಆರೋಪಿಸಿದ್ದರು. ಅಲ್ಲದೇ ಬಾಬರ್ ಅಜಮ್ ನಾಯಕತ್ವದ ತಂಡದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಆಟಗಾರರಲ್ಲಿ ಹೊಂದಾಣಿಕೆ ಇಲ್ಲ ಎಂದು ಆರೋಪಿಸಿದ್ದರು.