ಕಾಳಿ ದೇವಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದ ಕಿರೀಟ ಬಾಂಗ್ಲಾದೇಶ ದೇವಸ್ಥಾನದಿಂದ ಕಳುವಾಗಿದೆ.
ಶ್ಯಾಮನಗರದ ಸತ್ಕಿರಾದಲ್ಲಿರುವ ಜೇಶೋರೇಶ್ವರಿ ದೇವಸ್ಥಾನಕ್ಕೆ 20221 ಮಾರ್ಚ್ ನಲ್ಲಿ ಭೇಟಿ ನೀಡಿದ್ದ ಪ್ರಧಾನಿ ಮೋದಿ ದೇವಿಗೆ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.
ಗುರುವಾರ ಮಧ್ಯಾಹ್ನ 2.30ರಿಂದ 2.30ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಆಗ ದೇವಸ್ಥಾನ ಪೂಜಾರಿ ದಿಲೀಪ್ ಮುಖರ್ಜಿ ಪೂಜೆಗಳನ್ನು ಮುಗಿಸಿ ಮಧ್ಯಾಹ್ನ ಮನೆಗೆ ಮರಳಿದ್ದಾಗ ವಿಗ್ರಹದ ಕಿರೀಟ ಕಳುವಾಗಿದೆ. ದೇವಸ್ಥಾನದ ಸಿಬ್ಬಂದಿ ದೇವಸ್ಥಾನ ಸ್ವಚ್ಛಗೊಳಿಸುವಾಗ ದೇವರ ಕಿರೀಟ ನಾಪತ್ತೆಯಾಗಿರುವುದನ್ನು ಕಂಡು ಮಾಹಿತಿ ನೀಡಿದ್ದಾರೆ.
ಜೇಶೋರೇಶ್ವರಿ ದೇವಿ ಭಾರತ ಮತ್ತು ನೆರೆಯ ದೇಶಗಳ ಸುಮಾರು 51 ದೇವತೆಗಳ ಶಕ್ತಿಪೀಠವಾಗಿದೆ. ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಈ ದೇವಿಗೆ ಚಿನ್ನ ಮತ್ತು ಬೆಳ್ಳಿಯಿಂದ ನಿರ್ಮಿಸಲಾಗಿದ್ದ ಕಿರೀಟವನ್ನು ಎರಡೂ ದೇಶಗಳ ಸಂಸ್ಕೃತಿಯ ಪ್ರತೀಕವಾಗಿ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದರು.
ಕಿರೀಟ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದು, ಕಳ್ಳನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
12ನೇ ಶತಮಾನದಲ್ಲಿ ಅನಾರಿ ಎಂಬ ಬ್ರಾಹ್ಮಣ ಕಾಳಿದೇವಿಯ ದೇವಸ್ಥಾನ ನಿರ್ಮಿಸಿದ್ದು, 100 ಬಾಗಿಲುಗಳ ಜೇರೋಶ್ವರಿ ಪೀಠವನ್ನು ನಿರ್ಮಿಸಲಾಗಿದ್ದು, 13ನೇ ಶತಮಾನದಲ್ಲಿ ಲಕ್ಷ್ಮಣ್ ಸೇನ್ ಎಂಬಾತನ ಪುನಶ್ಚೇತನಗೊಳಿಸಿದ. ನಂತರ 16ನೇ ಶತಮಾನದಲ್ಲಿ ರಾಜ ಪ್ರತಾಪದಿತ್ಯ ದೇವಸ್ಥಾನ ಮರು ನಿರ್ಮಿಸಿದ.