ಭಾರತದ ಧರಂಭೀರ್ ಪ್ಯಾರಾಲಿಂಪಿಕ್ಸ್ ನ ಕ್ಲಬ್ ತ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಪ್ರಣವ್ ಸೂರ್ಮಾ ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ.
ಬುಧವಾರ ತಡರಾತ್ರಿ ಪ್ಯಾರಿಸ್ ನಲ್ಲಿ ನಡೆದ ಎಫ್ 51 ವಿಭಾಗದ ಕ್ಲಬ್ ಹೌಸ್ ಫೈನಲ್ ನಲ್ಲಿ ಧರಂಭೀರ್ 34.92ಮೀ. ದೂರ ಎಸೆದು ಚಿನ್ನದ ಪದಕದ ಸಾಧನೆ ಮಾಡಿದರೆ ಪ್ರಣವ್ 34.59 ಮೀ. ನೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡರು.
ಭಾರತದ ಮತ್ತೊಬ್ಬ ಸ್ಪರ್ಧಿ ಅಮಿತ್ ಕುಮಾರ್ ಕಳಪೆ ಪ್ರದರ್ಶನದೊಂದಿಗೆ ಫೈನಲ್ ತಲುಪಿದ 10 ಸ್ಪರ್ಧಿಗಳಲ್ಲಿ ಕೊನೆಯ ಸ್ಥಾನಕ್ಕೆ ಕುಸಿದರು.
ವಿಶ್ವ ಚಾಂಪಿಯನ್ ಭಾರತದ ಸಚಿನ್ ಸರ್ಜೆರಾವ್ ಕಿಲಾರಿ ಶಾಟ್ ಪುಟ್ ಎಫ್ 46 ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾದರು.
ಇದರೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್ ನಲ್ಲಿ 7ನೇದಿನದ ಅಗತ್ಯಕ್ಕೆ 5 ಚಿನ್ನ, 9 ಬೆಳ್ಳಿ ಮತ್ತು 10 ಕಂಚು ಸೇರಿದಂತೆ 24 ಪದಕದೊಂದಿ ಸಾರ್ವಕಾಲಿಕ ದಾಖಲೆ ಬರೆದು ಪದಕ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಜಿಗಿಯಿತು.