ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ಕಚೇರಿಯಲ್ಲಿ ಪದಗ್ರಹಣ ಮಾಡಿದರು.
ಭಾನುವಾರ ರಾತ್ರಿ 7.30ಕ್ಕೆ 72 ಸಂಸದರೊಂದಿಗೆ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮೋದಿ ಸಂಸತ್ ಭವನದ ದಕ್ಷಿಣ ಭಾಗದಲ್ಲಿರುವ ತಮ್ಮ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಕಚೇರಿಯಲ್ಲಿ ಪದಗ್ರಹಣ ಮಾಡಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಈ ವರ್ಷದ 2ನೇ ಕಂತು ರೈತರಿಗೆ ಬಿಡುಗಡೆ ಮಾಡಬೇಕಿದ್ದ 20 ಸಾವಿರ ಕೋಟಿ ರೂ. ಬಿಡುಗಡೆಗೆ ಪ್ರಧಾನಿ ಮೊದಲ ಸಹಿ ಹಾಕಿದರು. ಇದು ದೇಶದ 9.5 ಕೋಟಿ ರೈತರಿಗೆ ನೆರವಾಗಲಿದೆ. ಪ್ರತಿ ರೈತರಿಗೆ 2000 ರೂ. ನೀಡುವ ಯೋಜನೆ ಇದಾಗಿದ್ದು, ಮೋದಿ ಸರ್ಕಾರದಲ್ಲಿ 17ನೇ ಕಂತು ಇದಾಗಿದೆ.
ಇದೇ ವೇಳೆ ಬಡವರಿಗೆ ಉಚಿತ ವಸತಿ ನೀಡುವ ಯೋಜನೆಗೆ ಒತ್ತು ನೀಡಲು ನಿರ್ಧರಿಸಿರುವ ಮೋದಿ, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 2 ಕೋಟಿ ಬಡವರಿಗೆ ವಸತಿ ನೀಡುವ ಯೋಜನೆಯನ್ನು ಸೋಮವಾರವೇ ಘೋಷಿಸುವ ಸಾಧ್ಯತೆ ಇದೆ.