ನಿವೃತ್ತಿ ನಂತರವೂ ಪೊಲೀಸ್ ಅಧಿಕಾರಿ ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸುವ ನಿವೃತ್ತ ಆರೋಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಪೊಲೀಸರು ಅಂದರೆ ಕರ್ತವ್ಯದಲ್ಲಿ ಇರುವವರಿಗೆ ಮಾತ್ರ ಚಿಕಿತ್ಸೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ಸರ್ಕಾರದಿಂದ ದೊರೆಯುತ್ತವೆ. ಆದರೆ ರಾಜ್ಯ ಸರ್ಕಾರ ನಿವೃತ್ತಿಗೊಂಡ ನಂತರವೂ ಪೊಲೀಸ್ ಅಧಿಕಾರಿಗಳ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಯನ್ನು ಜಾರಿಗೆ ತಂದಿದೆ.
ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಸೇವಾ ನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಿಜಿ ಹೆಚ್‌ಎಸ್ ದರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.
ಇದೇ ರೀತಿ ಅವರ ಕುಟುಂಬಕ್ಕೂ ಚಿಕಿತ್ಸೆ ಒದಗಿಸುವ ಬಗ್ಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಪ್ರಕ್ರಿಯೆಗೆ ಗರಿಷ್ಠ ಮಿತಿ ಒಂದು ವರ್ಷಕ್ಕೆ ಒಬ್ಬ ಕುಟುಂಬ ಸದಸ್ಯರಿಗೆ ಗರಿಷ್ಠ 1 ಲಕ್ಷ ರೂ. ವಿಶೇಷ ಹಾಗೂ ಸಂಕೀರ್ಣ ಶಸ್ತ್ರ ಚಿಕಿತ್ಸೆಗಾಗಿ (ಇಂಪ್ಲಾಂಟ್, ಸ್ಟಂಟ್) ಮುಂತಾದ ಚಿಕಿತ್ಸೆಗಾಗಿ ಹೆಚ್ಚುವರಿ 1 ಲಕ್ಷ ರೂ. ಸೇರಿದಂತೆ ಗರಿಷ್ಠ 2 ಲಕ್ಷ ರೂ.ವರೆಗೂ ಟ್ರಸ್ಟ್ ವತಿಯಿಂದ ನೀಡಲು ಸರ್ಕಾರ ನಿರ್ಧರಿಸಿದೆ.