ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಆರೋಗ್ಯ ವಿಮಾ ಯೋಜನೆಯಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆರ್ಥಿಕ ಹಿನ್ನೆಲೆ ಹೊರತಾಗಿಯೂ 70 ವರ್ಷ ಮೇಲಿನ ಎಲ್ಲಾ ವಯೋಮಾನದವರಿಗೂ ಆರೋಗ್ಯ ವಿಮೆ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಜಾರಿಗೆ ಅನುಮೋದನೆ ನೀಡಲಾಗಿದ್ದು, ಈ ಯೋಜನೆಯಿಂದ ಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ಹಾಗೂ 4.5 ಕೋಟಿ ಕುಟುಂಬಗಳಿಗೆ ಲಭ್ಯವಾಗಲಿದೆ.
ಆರ್ಥಿಕವಾಗಿ ದುರ್ಬಲವಾದವರಿಗೂ ಹಾಗೂ ಸಬಲರಾದವರಿಗೂ ಈ ಯೋಜನೆ ತಲುಪಲಿದ್ದು, ಕುಟುಂಬದ ಅವಲಂಬನೆ ಆಧರಿಸಿ ಗರಿಷ್ಠ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ದೊರೆಯಲಿದೆ.ಈಗಾಗಲೇ ಆಯುಷ್ಮಾನ್ ಯೋಜನೆಯ ಲಾಭ ಪಡೆದವರಿಗೂ ಹೆಚ್ಚುವರಿಯಾಗಿ 5 ಲಕ್ಷ ರೂ. ನೆರವು ದೊರೆಯಲಿದೆ ಎಂದು ಸಂಪುಟ ಸಭೆಯ ನಂತರ ವಿವರಿಸಲಾಗಿದೆ.