ವಿವಾದಿತ ಪಾಕಿಸ್ತಾನ ಆಕ್ರಮಿತ ಪ್ರದೇಶ ವಿದೇಶಕ್ಕೆ ಸೇರಿದ್ದು, ಈ ಪ್ರದೇಶ ಪಾಕಿಸ್ತಾನದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಸ್ಲಾಮಾಬಾದ್ ಹೈಕೋರ್ಟ್ ಗೆ ಪಾಕಿಸ್ತಾನ ಸರ್ಕಾರ ವರದಿ ನೀಡಿದೆ. ಈ ಮೂಲಕ ಪರೋಕ್ಷವಾಗಿ ಪಿಒಕೆ ಭಾರತಕ್ಕೆ ಸೇರಿದ್ದು ಒಪ್ಪಿಕೊಂಡಂತಾಗಿದೆ.
ಕಾಶ್ಮೀರಿ ಕವಿ ಮತ್ತು ಪತ್ರಕರ್ತ ಅಹ್ಮದ್ ಫರಾದ್ ಖಾನ್ ಅವರ ಅಪಹರಣ ಪ್ರಕರಣದ ವಿಚಾರಣೆ ವೇಳೆ ಮೇ 31ರಂದು ಪಾಕಿಸ್ತಾನದ ಅಡಿಷನಲ್ ಅಟರ್ನಿ ಜನರಲ್ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಈ ವರದಿ ನೀಡಿದರು.
ಮೇ 15ರಂದು ರಾವಲ್ಪಿಂಡಿಯಿಂದ ಪತ್ರಕರ್ತ ಅಹ್ಮದ್ ಫರಾದ್ ಖಾನ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಅಹ್ಮದ್ ಅವರ ಪತ್ನಿ ಪತಿಯನ್ನು ಹುಡುಕಿಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಮೊಹಸಿನ್ ಕಯಾನಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅಹ್ಮದ್ ಫರಾದ್ ಖಾನ್ ಪಾಕ್ ಆಕ್ರಮಿತ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಇದ್ದಾರೆ. ಈ ಪ್ರದೇಶ ಪಾಕಿಸ್ತಾನದ ವ್ಯಾಪ್ತಿಗೆ ಬರುವುದಿಲ್ಲ. ಇದು ಅಂತಾರಾಷ್ಟ್ರೀಯ ಪ್ರದೇಶ ಎಂದು ಅಡಿಷನಲ್ ಅಟರ್ನಿ ಜನರಲ್ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಹೇಗೆ ಪಾಕಿಸ್ತಾನ ಸೇನೆ ಹೋಗಲು ಸಾಧ್ಯ? ಹೇಗೆ ರಕ್ಷಣೆ ಮಾಡಲು ಸಾಧ್ಯ ಎಂದು ಪಾಕಿಸ್ತಾನ ಸರ್ಕಾರ ಪ್ರಶ್ನಿಸಿದೆ.