ಕೆಲವು ಕ್ಯಾನ್ಸರ್ ಔಷಧಗಳ ಮೇಲಿನ ಜಿಎಸ್ ಟಿಯಲ್ಲಿ ಕಡಿತ ಮಾಡಿರುವ ಕೇಂದ್ರ ಜಿಎಸ್ ಟಿ ಕೌನ್ಸಿಲ್ ಸಭೆ, ಆರೋಗ್ಯ ವಿಮೆ ಮೇಲಿನ ತೆರಿಗೆ ಕಡಿತ ಕುರಿತ ನಿರ್ಧಾರವನ್ನು ಮುಂದೂಡಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸೋಮವಾರ ನಡೆದ 54ನೇ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಕೆಲವು ಔಷಧಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ5ಕ್ಕೆ ಇಳಿಸಲಾಗಿದೆ.
ಚೌಚೌ ಮುಂತಾದ ಮಸಾಲಾ ಪದಾರ್ಥಗಳ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ. ಇದೇ ವೇಳೆ ಆನ್ ಲೈನ್ ಗೇಮಿಂಗ್ ನಿಂದ ಕಳೆದ 6 ತಿಂಗಳಲ್ಲಿ ಸರ್ಕಾರಕ್ಕೆ ಶೇ.412 ಅಂದರೆ 6909 ಕೋಟಿ ರೂ. ಹೆಚ್ಚು ಆದಾಯ ಹೆಚ್ಚಿದೆ. ಕ್ಯಾಸಿನೊದಿಂದ ಕೇಂದ್ರಕ್ಕೆ ಶೇ.34ರಷ್ಟು ಆದಾಯ ಹೆಚ್ಚಿದೆ ಎಂದು ಸಭೆಯ ನಂತರ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇದೇ ವೇಳೆ ಭಾರೀ ಬೇಡಿಕೆ ಇರುವ ಆರೋಗ್ಯ ವಿಮೆಯ ಔಷಧಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.