2016ರ ರಿಯೊ ಒಲಿಂಪಿಕ್ಸ್ ನಲ್ಲಿ 4ನೇ ಸ್ಥಾ ಪಡೆಯುವ ಮೂಲಕ ಕೂದಲೆಳೆ ಅಂತರದಿಂದ ಪದಕ ವಂಚಿತರಾಗಿದ್ದ ಜಿಮ್ಯಾಸ್ಟಿಕ್ ಪಟು ದೀಪಾ ಕರ್ಮಾಕರ್ ನಿವೃತ್ತಿ ಘೋಷಿಸಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಸ್ಪರ್ಧಿಸಿದ ದೀಪಾ ಕಾರ್ಮಾಕರ್ ಗೆ ಇದೀಗ 31 ವರ್ಷ ವಯಸ್ಸಾಗಿದ್ದು, ಸೋಮವಾರ ಅಧಿಕೃತವಾಗಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ರಿಯೊ ಒಲಿಂಪಿಕ್ಸ್ ನಲ್ಲಿ ದೀಪಾ ಕಾರ್ಮಾಕರ್ 0.15 ಅಂಕಗಳಿಂದ ಬೆಳ್ಳಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು. ಆದರೆ ಭಾರತದ ಪರ ಗರಿಷ್ಠ ಸಾಧನೆ ಮಾಡಿದ ಗೌರವ ಪಡೆದಿದ್ದರು.
ಜಿಮ್ನಾಸ್ಟಿಕ್ ನನ್ನ ಜೀವನದ ಅತ್ಯಂತ ಪ್ರಮುಖವಾದ ಕ್ರೀಡೆಯಾಗಿತ್ತು. ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಈಗ ನೋಡಿಕೊಂಡರೆ ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ ನಲ್ಲಿ ಪಾಲ್ಗೊಳ್ಳುವುದು ಕಷ್ಟ. ಆದ್ದರಿಂದ ಕಾರಣದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ಎಕ್ಸ್ ನಲ್ಲಿ ದೀಪಾ ಪೋಸ್ಟ್ ಮಾಡಿದ್ದಾರೆ.