Thursday, December 25, 2025
Google search engine
Homeಆರೋಗ್ಯಯುವ ಸಮುದಾಯದ ಅಕಾಲಿಕ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ: ತಜ್ಞರ ವರದಿ

ಯುವ ಸಮುದಾಯದ ಅಕಾಲಿಕ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ: ತಜ್ಞರ ವರದಿ

ಬೆಂಗಳೂರು: ಆರೋಗ್ಯವಂತ ಯುವ ಸಮುದಾಯ ಏಕಾಏಕಿ ಹೃದಯಾಘಾತದಿಂದ ಮೃತಪಡಲು ಕೋವಿಡ್ ಲಸಿಕೆ ಕಾರಣವಲ್ಲ ಎಂದು 10 ನುರಿತ ವೈದ್ಯರ ತಂಡ ವರದಿ ನೀಡಿದೆ.

ಯುವಜನತೆ ಹೃದಯಾಘಾತದಿಂದ ಮೃತಪಡುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಕಾಲಿಕ ಸಾವಿಗೆ ಕೋವಿಡ್ ಲಸಿಕೆ ಕಾರಣ ಎಂಬ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಜ್ಞರ ತಂಡ ರಚಿಸಿದ್ದರು.

18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಮೃತಪಟ್ಟ 250 ಮಂದಿಯ ಸಾವಿನ ವರದಿಯ ಕುರಿತು 4 ತಿಂಗಳ ಕಾಲ ಅಧ್ಯಯನ ನಡೆಸಿದ ತಜ್ಞರ ತಂಡ ಈ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ.

ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ 13 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಈ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣ ಎನ್ನುವ ಸಂಶಯ ಮೂಡಿತ್ತು. ಧೂಮಪಾನ, ಮದ್ಯಪಾನ, ಕುಟುಂಬದಲ್ಲಿನ ಅನುವಂಶೀಯ ಕಾಯಿಲೆಗಳು ಹೃದಯಾಘಾತಕ್ಕೆ ಕಾರಣವಾಗುತ್ತಿವೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಾ ಇದ್ದದ್ದು ಹೃದಯಾಘಾತಕ್ಕೆ ಕಾರಣ. ವಿಮಲ್, ಗುಟ್ಕಾ ಸೇವನೆ ಕೂಡ ಹೃದಯಾಘಾತಕ್ಕೆ ಕಾರಣ ಎಂದು ವರಿದಿ ಹೇಳಿದೆ.

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದು ಸಂಶೋಧಕರ ವರದಿಯಲ್ಲಿ ಬಯಲಾಗಿದೆ. ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments