Wednesday, December 24, 2025
Google search engine
Homeಆರೋಗ್ಯರಾಜ್ಯದಲ್ಲಿ ತೀವ್ರ ಚಳಿ: ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ

ರಾಜ್ಯದಲ್ಲಿ ತೀವ್ರ ಚಳಿ: ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಶೀತಗಾಳಿ ಬಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಗಢಗಢ ಚಳಿಗೆ ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗತ್ಯ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೊರಡಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.
ಸಲಹೆಗಳು

ದೇಹ ಬೆಚ್ಚಗಿರಿಸಿಕೊಳ್ಳಿ

ದಪ್ಪನಾದ ಒಂದೇ ಬಟ್ಟೆಯ ಬದಲಿಗೆ, ಹಲವು ಪದರಗಳ ಸಡಿಲವಾದ, ಹಗುರವಾದ, ಉಣ್ಣೆಯ ಬಟ್ಟೆಗಳನ್ನು ಧರಿಸಿ.

ಕೈಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿ: ಟೋಪಿ/ಮಫ್ಲರ್ (ದೇಹದ ಮುಖ್ಯ ಶಾಖ ತಲೆಯ ಮೂಲಕ ನಷ್ಟವಾಗುತ್ತದೆ), ಬೆಚ್ಚಗಿನ ಕಾಲುಚೀಲಗಳು ಮತ್ತು ಜಲನಿರೋಧಕ (waterproof) ಶೂಗಳನ್ನು ಬಳಸಿ ಬೆಚ್ಚಗಿನ ಪಾನೀಯ ಸೇವಿಸಿ

ದೇಹವನ್ನು ಹೈಡ್ರೆಟ್ ಆಗಿಡಲು ಬೆಚ್ಚಗಿನ ದ್ರವಗಳನ್ನು (ನೀರು, ಗಿಡಮೂಲಿಕೆ ಚಹಾ ಮತ್ತು ಸೂಪ್ ಇತ್ಯಾದಿ) ನಿಯಮಿತವಾಗಿ ಕುಡಿಯಿರಿ, ಬಾಯಾರಿಕೆಗಾಗಿ ಕಾಯಬೇಡಿ.

ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ದೇಹದ ಶಾಖವನ್ನು ಹೆಚ್ಚಿಸಲು ವಿಟಮಿನ್-ಸಿ ಸಮ್ರದ ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿ.
ವೃದ್ದರು, ಮಕ್ಕಳ ಬಗ್ಗೆ ಗಮನವಿರಲಿ

ಸಾಧ್ಯವಾದಷ್ಟು ಮನೆಯೊಳಗೆ ಇರಿ, ವಿಶೇಷವಾಗಿ ಹೆಚ್ಚು ಚಳಿಯಿರುವ ಸಮಯದಲ್ಲಿ (ಬೆಳಗಿನ ಜಾವ ಮತ್ತುತಡರಾತ್ರಿ) ದುರ್ಬಲರ ಬಗ್ಗೆ ಗಮನ ಕೊಡಿ. ವೃದ್ಧರು, ಮಕ್ಕಳು ಮತ್ತು ಶಿಶುಗಳು ಸಾಕಷ್ಟು ಬೆಚ್ಚಗಿರಲು ನಿಯಮಿತವಾಗಿ ಅವರನ್ನು ಪರಿಶೀಲಿಸಿ.

ಚರ್ಮ ರಕ್ಷಣೆಗೆ ಆದ್ಯತೆ ನೀಡಿ

ಹೈಪೋಥರ್ಮಿಯಾ (ನಡುಕ, ಗೊಂದಲ, ತೊದಲುವಮಾತು) ಮತ್ತು ಫ್ರಾಸ್ಟ್‌ ಬೈಟ್ (ನಿಶೇಷತೆ, ಬಿಳಿ ಅಥವಾ ಮೇಣದಂತಹ ಚರ್ಮ) ನಂತಹ ಚಳಿ-ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ತಿಳಿದುಕೊಳ್ಳಿ.

ಚಳಿ ಮತ್ತು ಒಣಗಾಳಿಯಿಂದ ಚರ್ಮಬಿರುಕು ಬಿಡುವುದನ್ನು ತಡೆಯಲು ಎಣ್ಣೆ, ಪೆಟ್ರೋಲಿಯಂಜೆಲ್ಲಿ ಅಥವಾ ಕ್ರೀಮ್‌ನಿಂದ ನಿಯಮಿತವಾಗಿ ಚರ್ಮವನ್ನು ತೇವಗೊಳಿಸಿ.

ದೂರದರ್ಶನ, ರೇಡಿಯೋ ಅಥವಾ ಪತ್ರಿಕೆಗಳ ಮೂಲಕ ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ದೈನಂದಿನ ಹವಾಮಾನ ಮಾಹಿತಿಯನ್ನು ಗಮನಿಸಿ.

ಮುನ್ನೆಚ್ಚರಿಕಾ ಕ್ರಮಗಳು

ಮದ್ಯಪಾನದಿಂದ ದೂರವಿರಿ

ಮದ್ಯಪಾನ ಮಾಡಬೇಡಿ. ಇದು ಬೆಚ್ಚಗಿನ ಭಾವನೆಯನ್ನು ನೀಡುತ್ತದೆ ಎಂಬುದು ಸುಳ್ಳು. ಆದರೆ ವಾಸ್ತವವಾಗಿ ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಕಡಿಮೆ ಮಾಡುತ್ತದೆ. ಹೈಪೋಥರ್ಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ.

ನಡುಕವನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹವು ಶಾಖವನ್ನು ಕಳೆದುಕೊಳ್ಳುತ್ತಿದೆ ಎಂಬುದರ ಮೊದಲ ಚಿಹ್ನೆ, ತಕ್ಷಣ ಮನೆಯೊಳಗೆ ಹೋಗಿ.

ಚರ್ಮ, ಅಂಗಾಂಗ ರಕ್ಷಣೆ ಕಡೆಗಣಿಸಬೇಡಿ

ಫ್ರಾಸ್ಟ್ ಬೈಟ್ ಅಥವಾ ಚಳಿಯಿಂದ ಮರಗಟ್ಟಿದ ಚರ್ಮದ ಪ್ರದೇಶವನ್ನು ಉಜ್ಜಬೇಡಿ ಅಥವಾ ಮಸಾಜ್‌ ಮಾಡಬೇಡಿ. ಇದು ತೀವ್ರವಾದ ಅಂಗಾಂಶ ಹಾನಿಯನ್ನು ಉಂಟುಮಾಡಬಹುದು.

ಫ್ರಾಸ್ಟ್ ಬೈಟ್ ಆದಚರ್ಮವನ್ನು ಬೆಚ್ಚಗಾಗಿಸಲು ನೇರವಾದ, ತೀವ್ರವಾದ ಶಾಖವನ್ನು (ಹೀಟಿಂಗ್ಸ್‌ಾಡ್, ಬೆಂಕಿ ಅಥವಾ ಬಿಸಿನೀರು ಬಳಸಬೇಡಿ, ಏಕೆಂದರೆ ನಿಶ್ಲೇಷಗೊಂಡ ಪ್ರದೇಶವು ಸುಲಭವಾಗಿ ಸುಟ್ಟು ಹೋಗಬಹುದು.
ಒಳಾಂಗಣ ಸುರಕ್ಷತೆ

ಗಾಳಿಯಿಲ್ಲದ ಮುಚ್ಚಿದ ಕೋಣೆಯಲ್ಲಿ ಕಲ್ಲಿದ್ದಲು, ಕಟ್ಟಿಗೆ ಅಥವಾ ಕ್ಯಾಂಡಲ್‌ಗಳನ್ನು ಉರಿಸಬೇಡಿ. ಇದು ಮಾರಣಾಂತಿಕ ಕಾರ್ಬನ್ಮಾನಾಷಕ್ಕೆ ಕಾರಣವಾಗಬಹುದು. ಮನೆ ಒಳಗೆ ಗಾಳಿ, ಬೆಳಕು ಬಾರದಂತೆ ಮಾಡಬೇಡಿ.
ಬೆಂಕಿ ಅಥವಾ ತಾಪನ ಸಾಧನವನ್ನು ಗಮನಿಸದೆ ಬಿಡಬೇಡಿ.

ಹೊರಾಂಗಣ ಚಟುವಟಿಕೆ

ಹೆಚ್ಚು ದೈಹಿಕ ಶ್ರಮ ಮಾಡಬೇಡಿ (ಉದಾಹರಣೆಗೆ, ತೀವವಾದ ಹೊರಾಂಗಣ ಕೆಲಸ) ಹೆಚ್ಚು ಬೆವರುವಿಕೆಯು ನಿಮ್ಮ ಬಟ್ಟೆಗಳನ್ನು ಒದ್ದೆ ಮಾಡಿ ವೇಗವಾಗಿ ತಣ್ಣಗಾಗಲು ಕಾರಣವಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments